Sunday, June 23, 2013

ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ

ಮನಸೆಕೋ ಹಾಡಿದೆ ಈ ಹಾಡನು
ನೆನಪಿಸಿದೆ ಮಳೆನಿಂತ ಜಾಡೊಂದನು
ಮಿಂಚಿ ಮರೆಯಾದ ನಿನ್ನಯಾ ನಗು
ಕಿವಿಮುಚ್ಹೋ ಮೊದಲೇನೆ ಕೇಳುವಾ ಗುಡುಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಹಗಲಲ್ಲೊ, ಇರುಳಲ್ಲೋ ಒಮ್ಮೆ ಮುದ್ದಿಸು
ಸಾಕಾದ ಏಕಾಂತ ನೀ ತಪ್ಪಿಸು
ಅಭಿಮಂತ್ರಿಸು, ಆಮಂತ್ರಿಸು ..
ಬಯಸಿರುವಾ ತುಟಿಗಳಾ ಒಮ್ಮೆ ಚುಂಬಿಸು ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ನಲ್ಲೆ, ನಲ್ಲೆ ..
ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ
ನೀ ನಡೆದ ದಾರಿಯ ಸವೆಯಬಲ್ಲೆ
ನಿಟ್ಟುಸಿರ ಬಿಡಲೊಮ್ಮೆ ನಿಲ್ಲೆ ಅಲ್ಲೇ ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಏಕಾಂತ ಸಾಹಿತ್ಯ ಸಾನಿಧ್ಯ ತೊರೆದು
ಸಖಿಗೀತ ಮೂಡಿಸುವೆ ನಿನ್ನ ಚಿತ್ರ ಬರೆದು
ಸ್ವಲ್ಪವೇ ಜಾರಬಹುದು, ನಿನ್ನ ಛಾಯೆಯ ಸೆರಗು
ಕೊಡು ಕೊಡುತಾ ನಿನ ಅಂದಕೆ ಇನ್ನಷ್ಟು ಮೆರಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...


Saturday, June 22, 2013

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

ಅಲೆಗಳೇ ಹುಚ್ಚೇ, ನಾನೇ ಹೆಚ್ಚೇ
ಇನ್ನು ಸಾಕೇ ?? ಮತ್ತು ಬೇಕೇ??
ಮಿಥ್ಯಕೆ ಮಿಥ್ಯ , ಸಾವೇ ಸತ್ಯ
ಸತ್ಯಕೂ ಮಿಥ್ಯ , ಸತ್ಯದ ಸಾವೇ ಮಿಥ್ಯ
ಕತ್ತಲಲಿ ಬೆಳೆಯುತಿಹುದು ಮಿಥ್ಯ
ನಿಂತು ನೋಡುತಿರುವ ಸತ್ಯ , ಸಾವಲು ನಗುತಲಿರುವ ಸತ್ಯ

ಬಾವನೆ ಸಾಕು , ಬೆತ್ತಲೆ ಬೇಕು
ಅವಳು ಬೇಕು , ಆದುವು ಬೇಕು
ಎಲ್ಲವು ನಾನೇ , ಎಲ್ಲವೂ ನನದೆ
ಮನುಜನೆ ಇಲ್ಲವೇ ನಿನಗೆ ತೀರಾ ??
ತೀರದಾ ವ್ಯಾಮೊಹಗಳಿಗೆ ಬೇಲಿ ಎಂಬ ತೀರಾ
ಮನಸಿಗೆ ಸಾಕು ಎಂಬ ತೀರಾ ... ಸತ್ಯವೇ ಬೇಕು ಎಂಬ ತೀರಾ ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

Wednesday, June 12, 2013

ನೀನೆ ತಂಪು, ನಿನಗೇಕೆ ತಂಪು ??

ಮಳೆಯ ಹನಿಯೊಂದು ನೆಲ ಸೇರಿದೆ
ಮುಗಿಲ ಮರೆಯಿಂದ ನೆಲೆ ಜಾರಿದೆ.
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಹ್ರದಯಕ್ಕು ನೋವು ತಿಳಿದಂತಿದೆ ..


ಆಹಾ, ಆಹಾ ! ಮತ್ತೇಕೆ? ಮತ್ತೇಕೆ??
ಅದುವೇ ಆಸೆ !!
ಮುಗಿಲೇ ಬೇಕೆನ್ನೋ ಮಳೆ ಹನಿಯ ಭಾಷೆ, ಜೊತೆಯಾಗಿ ನಿಲ್ಲೋಕೆ ರವಿಯೆಂಬ ಉಷೆ 
ಅವಳತ್ತ ಸಾಗೆನ್ನೋ ಮನಸಿನ ನಿಶೆ, ಪ್ರೀತಿಯ ನಶೆ ..


ನನ್ನಲ್ಲಿ ಸೇರೋಕೆ ಮನಸಾಗದೆ ? ಹೊಸ ಚಿಗುರಿಗೆ ಉಸಿರು ನಿನಾಗದೆ ..
ನೀನೆ ತಂಪು, ನಿನಗೇಕೆ ತಂಪು ??
ಬಾ ನನ್ನ ಸನ್ನಿದಿಗೆ ಶ್ವೇತಾಂಬರಿ , ಕಾಯುತ್ತ ನಿಂತಿಹಳು ಗೋಧಾವರಿ.
ಸಖಿಯು ನೀನೆ, ಸಂಗಾತವೂ ನೀನೆ
ಮುನ್ನುಡಿಯ ಸಾಲು ಬೇಕಾಗಿದೆ, ಪಲ್ಲವಿಯ ನಾ ಬರೆದು ಇತ್ತಾಗಿದೆ.  

 
ಉಸಿರೇ ಬದುಕು, ಬಾವಕ್ಕೇ ಬದುಕು ತೆರೆಮರೆಯ ಆಟಕ್ಕೆ ಸಮಯ ಎಲ್ಲಿದೆ ?
ಮುಗಿಲೆತ್ತರದ ಜೀವನ ಕೈ ಬಿಸಿದೆ .  
ರಸವೇ ಜನನ, ವಿರಸವೇ ಮರಣ, ಸಮರಸವೆ ಜೀವನ ತಿಳಿದಾಗಿದೆ
ಮಳೆಹನಿಯಲಿ ಬುವಿಯು ಮಿಂದಾಗಿದೆ , ಅವಳಿಗ ಬಳಿ ನಿಂದು ನಲಿದಾಗಿದೆ
 
ಮಳೆಯ ಹನಿಯೊಂದು ನೆಲ ಸೇರಿದೆ
ಹಸಿರಾ ಉಸಿರಿಗೆ ಜೀವ ನೀಡಿದೆ 
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಆನಂದ ಭಾಷ್ಪಕ್ಕು ಹ್ರದಯ ಮಿಡಿದಿದೆ.
 

Sunday, May 26, 2013

ಅವಳು ಅಹಲ್ಯಾ....

ಶಾಶ್ವತವಾಗಿದೆ ಬೆಳಕಿನ ದಿಬ್ಬಣ
ಕತ್ತಲ ಇರುಳಿನ ನೆರಳೊಳಗೆ
ಕಂಡು ಕಾಣದೆ, ನಿಂತು ಕೇಳದೆ
ಓಡುತ ಸಾಗಿದೆ ಅವಳಾ ಮನಾ
ಅವನೆಡೆಗೆ , ಅವನೆದೆಗೆ.......

ನಿರಂತರ ಸತ್ಯಕೆ, ಸುಳ್ಳಿನ ಬಾವಕೆ
ಬಾವದ ಒಡನೆಯೇ ಬೇಗುದಿ ಮಿಡಿತಕೆ
ದೂರವೇ ನಿಂತನು, ವಲವಿನ ಗೆಳಯನು
ಅವಳ ಹ್ರದಯವೇ ಸಮುದ್ರಾ, ಮನಸೇ ಅಲೆಗಳ
ಚಿತ್ತ ಚಾಂಚಲ್ಯ .. ಅವಳು ಅಹಲ್ಯಾ....

ಅಚ್ಹ ಬಿಳುಪಿನ ಹಿಮಾಲಯ ಶ್ವೇತೆ
ಕೆತ್ತಿ ಕಡೆದ ಅವಳದೇ ಕಲ್ಪನೆ, ಅವಳೇ ಶಿಲ್ಪಿ
ತಿರದ ವ್ಯಾಮೋಹ, ತೆರೆದ ಬಾಗಿಲು
ಮುಚ್ಚಬಾರದಿತ್ತೆ ಕದಾ ? ಅವನು ಅತಂತ್ರ
ಬಯಸಿ ಸ್ವಾತಂತ್ರ್ಯ ...

ಮುಗಿದಿದೆ ಎಲ್ಲವು, ಬಂಧನ ಸಲಿಲವೂ
ತುಂಬಿ ನಿಂತಿತು ಕಣ್ಣಿನ ಕೊಳ, ಹೆಣ್ಣಿನ ಮನಾ
ತಿಳಿದಿದೆ ಅವನಿಗೂ ಕೊನೆಯ ಕ್ಷಣಕೆ
ಕೊಟ್ಟ ನೋವಿಗೂ, ಅವಳ ನಲಿವಿಗೂ
ಎಲ್ಲಿಯದು ಸಂಬಧ , ಪ್ರೀತಿಯೇ ರುಣಾನುಬಂಧ

ಸೇರಲು ಬಯಸಿತು ಅರಿವಿನ ನಿಮಿಷವೂ
ಮಡಿಲ ಸೆರೆಯಲಿ ಅವಳ ದೇಹವೂ
ತಣ್ಣನೆ ಸ್ಪರ್ಶವೂ, ಕಂಗಳಲಿ ದೂರ ದಿಗಂತ
ಅವನೀಗ ಸ್ವತಂತ್ರ ..
ದೇಹದ ಪರಿದಿಯೂ, ಮನಸಿನ ಸರದಿಯೂ ಕೇವಲ ನಿಮಿತ್ತ..

Saturday, April 20, 2013

ನೇಸರದ ಕತ್ತಲಲಿ ಜಾರಿ ಹೋದೆನು ನಾನು ...


ನೇಸರದ ಕತ್ತಲಲಿ ಜಾರಿ ಹೋದೆನು ನಾನು
ಎಲ್ಲಿಯೂ ನೆಲೆಯಿಲ್ಲದೆ, ನೆಲೆನಿಲ್ಲದೆ, ನೆಲವಿಲ್ಲದೆ ..
ಪರ್ವ ಸಾಕ್ಷಿಯ ಮುದ್ದು ಮನಸೊಂದು ಕಳೆದು ಹೋಯಿತು ದೂರ
ಬೆಲೆಯಿಲ್ಲದೆ, ಬೆಲೆ ಕಟ್ಟದೆ , ಬೆಲೆ ಬಾಳದೆ.....
ಭಯವೇತಕೆ ನಿನಗೆ, ಓಹ್ ಮುಗ್ದ ಮನಸೇ
ಕತ್ತಲಲು ಕೂಡ ಬದುಕುಂಟು ನಿನಗೆ ..
ಹಲವು ತಾರೆಗಳ ಆಶ್ರಯ ಸಾಕಾಗದೆ
ಸಾಂತ್ವನಕೆ, ಸಾಂಗತ್ಯಕೆ, ಸಲ್ಲಾಪಕೆ ....
ಮತ್ತದೇ ನೆನಪು, ಬೆಚ್ಚನೆಯ ಬೆಳಕಿನಬಿಳುಪು
ವಯ್ಯಾರಕೆ, ಸುಪ್ತ ವ್ಯಾಮೋಹಕೆ,ಮಧುರ ಆಲಿಂಗನಕೆ
ಕತ್ತಲೇತಕೆ ಅಸಹ್ಯ, ಕತ್ತಲೇತಕೆ ನಿರ್ಲಿಪ್ತ
ಕತ್ತಲೇತಕೆ ಶೂನ್ಯ, ಕಪ್ಪು ಕಪ್ಪು ಗಾಢ೦ಧ...
ಒಹ್ ಮುಗ್ದ ಮನಸೇ, ಕತ್ತಲೆ ಮತ್ತೆ ಮಾತನಾಡಿತು ಹಿತದಿ
ಕತ್ತಲೆ ಕಳಚುವುದು ನಿನ್ನ ಅಂತರಂಗ ..
ಯೋಚನೆಯ ಆಳಕ್ಕೂ ಸಾಗಿ ಬರುವುದು ನಿಜದಿ ..
ಬೆತ್ತಲೆ ಮಾಡಿ ತೋರುವುದು ನಿನ್ನೆ ನಿನಗೆ, ಇದೆ ನಿಜ
ಬದಲಾಯಿತು ಮಾತು , ಭಾವವಾಯಿತು ನೇಸರದ ಕತ್ತಲು
ಬದಲಾಯಿತು ಪದ್ಯದ ಮೊದಲ ಸಾಲು ...
ನೇಸರದ ಕತ್ತಲಲಿ ಜಾರಿ ಹೋದೆನು ನಾನು
ನೆಲೆ ಹುಡುಕುವ ಭಾವವಿಲ್ಲದೆ, ಬಾನಿಗೆ ಎಲ್ಲೇ ಹುಡುಕದೆ
ಪರ್ವ ಸಾಕ್ಷಿಯ ಮುದ್ದು ಮನಸೊಂದು ಕಳೆದು ಹೋಯಿತು ದೂರ
ಅಂತರಂಗವ ತೆರೆದು ಬೆಲೆ ಕೇಳದೆ, ನೆಲೆ ಎನ್ನದೆ ....

https://www.facebook.com/nillisnull

ಕಳೆದು ಹೋಗುವ ನೀನು ಹುಡುಕಾಡುವ ನಾನು


ಕಳೆದು ಹೋಗುವ ನೀನು ಹುಡುಕಾಡುವ ನಾನು
ಕನಸಲು ನಿನ್ನ ಮುಗ್ದ ನಗುವಿನ ಅಬ್ಯಂಜನ 
ಅದೇನೋ ಹಿತನರಳಿಕೆಯ ಕೋಲಾಹಲ