Sunday, May 26, 2013

ಅವಳು ಅಹಲ್ಯಾ....

ಶಾಶ್ವತವಾಗಿದೆ ಬೆಳಕಿನ ದಿಬ್ಬಣ
ಕತ್ತಲ ಇರುಳಿನ ನೆರಳೊಳಗೆ
ಕಂಡು ಕಾಣದೆ, ನಿಂತು ಕೇಳದೆ
ಓಡುತ ಸಾಗಿದೆ ಅವಳಾ ಮನಾ
ಅವನೆಡೆಗೆ , ಅವನೆದೆಗೆ.......

ನಿರಂತರ ಸತ್ಯಕೆ, ಸುಳ್ಳಿನ ಬಾವಕೆ
ಬಾವದ ಒಡನೆಯೇ ಬೇಗುದಿ ಮಿಡಿತಕೆ
ದೂರವೇ ನಿಂತನು, ವಲವಿನ ಗೆಳಯನು
ಅವಳ ಹ್ರದಯವೇ ಸಮುದ್ರಾ, ಮನಸೇ ಅಲೆಗಳ
ಚಿತ್ತ ಚಾಂಚಲ್ಯ .. ಅವಳು ಅಹಲ್ಯಾ....

ಅಚ್ಹ ಬಿಳುಪಿನ ಹಿಮಾಲಯ ಶ್ವೇತೆ
ಕೆತ್ತಿ ಕಡೆದ ಅವಳದೇ ಕಲ್ಪನೆ, ಅವಳೇ ಶಿಲ್ಪಿ
ತಿರದ ವ್ಯಾಮೋಹ, ತೆರೆದ ಬಾಗಿಲು
ಮುಚ್ಚಬಾರದಿತ್ತೆ ಕದಾ ? ಅವನು ಅತಂತ್ರ
ಬಯಸಿ ಸ್ವಾತಂತ್ರ್ಯ ...

ಮುಗಿದಿದೆ ಎಲ್ಲವು, ಬಂಧನ ಸಲಿಲವೂ
ತುಂಬಿ ನಿಂತಿತು ಕಣ್ಣಿನ ಕೊಳ, ಹೆಣ್ಣಿನ ಮನಾ
ತಿಳಿದಿದೆ ಅವನಿಗೂ ಕೊನೆಯ ಕ್ಷಣಕೆ
ಕೊಟ್ಟ ನೋವಿಗೂ, ಅವಳ ನಲಿವಿಗೂ
ಎಲ್ಲಿಯದು ಸಂಬಧ , ಪ್ರೀತಿಯೇ ರುಣಾನುಬಂಧ

ಸೇರಲು ಬಯಸಿತು ಅರಿವಿನ ನಿಮಿಷವೂ
ಮಡಿಲ ಸೆರೆಯಲಿ ಅವಳ ದೇಹವೂ
ತಣ್ಣನೆ ಸ್ಪರ್ಶವೂ, ಕಂಗಳಲಿ ದೂರ ದಿಗಂತ
ಅವನೀಗ ಸ್ವತಂತ್ರ ..
ದೇಹದ ಪರಿದಿಯೂ, ಮನಸಿನ ಸರದಿಯೂ ಕೇವಲ ನಿಮಿತ್ತ..

1 comment:

  1. ಅಹಲ್ಯೆಯರು ಎನಿತೋ ನಿಜ ಬದುಕಿನಲಿ ಇಂದಿಗೂ...

    http://badari-poems.blogspot.in/

    ReplyDelete