Sunday, June 23, 2013

ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ

ಮನಸೆಕೋ ಹಾಡಿದೆ ಈ ಹಾಡನು
ನೆನಪಿಸಿದೆ ಮಳೆನಿಂತ ಜಾಡೊಂದನು
ಮಿಂಚಿ ಮರೆಯಾದ ನಿನ್ನಯಾ ನಗು
ಕಿವಿಮುಚ್ಹೋ ಮೊದಲೇನೆ ಕೇಳುವಾ ಗುಡುಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಹಗಲಲ್ಲೊ, ಇರುಳಲ್ಲೋ ಒಮ್ಮೆ ಮುದ್ದಿಸು
ಸಾಕಾದ ಏಕಾಂತ ನೀ ತಪ್ಪಿಸು
ಅಭಿಮಂತ್ರಿಸು, ಆಮಂತ್ರಿಸು ..
ಬಯಸಿರುವಾ ತುಟಿಗಳಾ ಒಮ್ಮೆ ಚುಂಬಿಸು ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ನಲ್ಲೆ, ನಲ್ಲೆ ..
ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ
ನೀ ನಡೆದ ದಾರಿಯ ಸವೆಯಬಲ್ಲೆ
ನಿಟ್ಟುಸಿರ ಬಿಡಲೊಮ್ಮೆ ನಿಲ್ಲೆ ಅಲ್ಲೇ ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಏಕಾಂತ ಸಾಹಿತ್ಯ ಸಾನಿಧ್ಯ ತೊರೆದು
ಸಖಿಗೀತ ಮೂಡಿಸುವೆ ನಿನ್ನ ಚಿತ್ರ ಬರೆದು
ಸ್ವಲ್ಪವೇ ಜಾರಬಹುದು, ನಿನ್ನ ಛಾಯೆಯ ಸೆರಗು
ಕೊಡು ಕೊಡುತಾ ನಿನ ಅಂದಕೆ ಇನ್ನಷ್ಟು ಮೆರಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...


Saturday, June 22, 2013

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

ಅಲೆಗಳೇ ಹುಚ್ಚೇ, ನಾನೇ ಹೆಚ್ಚೇ
ಇನ್ನು ಸಾಕೇ ?? ಮತ್ತು ಬೇಕೇ??
ಮಿಥ್ಯಕೆ ಮಿಥ್ಯ , ಸಾವೇ ಸತ್ಯ
ಸತ್ಯಕೂ ಮಿಥ್ಯ , ಸತ್ಯದ ಸಾವೇ ಮಿಥ್ಯ
ಕತ್ತಲಲಿ ಬೆಳೆಯುತಿಹುದು ಮಿಥ್ಯ
ನಿಂತು ನೋಡುತಿರುವ ಸತ್ಯ , ಸಾವಲು ನಗುತಲಿರುವ ಸತ್ಯ

ಬಾವನೆ ಸಾಕು , ಬೆತ್ತಲೆ ಬೇಕು
ಅವಳು ಬೇಕು , ಆದುವು ಬೇಕು
ಎಲ್ಲವು ನಾನೇ , ಎಲ್ಲವೂ ನನದೆ
ಮನುಜನೆ ಇಲ್ಲವೇ ನಿನಗೆ ತೀರಾ ??
ತೀರದಾ ವ್ಯಾಮೊಹಗಳಿಗೆ ಬೇಲಿ ಎಂಬ ತೀರಾ
ಮನಸಿಗೆ ಸಾಕು ಎಂಬ ತೀರಾ ... ಸತ್ಯವೇ ಬೇಕು ಎಂಬ ತೀರಾ ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

Wednesday, June 12, 2013

ನೀನೆ ತಂಪು, ನಿನಗೇಕೆ ತಂಪು ??

ಮಳೆಯ ಹನಿಯೊಂದು ನೆಲ ಸೇರಿದೆ
ಮುಗಿಲ ಮರೆಯಿಂದ ನೆಲೆ ಜಾರಿದೆ.
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಹ್ರದಯಕ್ಕು ನೋವು ತಿಳಿದಂತಿದೆ ..


ಆಹಾ, ಆಹಾ ! ಮತ್ತೇಕೆ? ಮತ್ತೇಕೆ??
ಅದುವೇ ಆಸೆ !!
ಮುಗಿಲೇ ಬೇಕೆನ್ನೋ ಮಳೆ ಹನಿಯ ಭಾಷೆ, ಜೊತೆಯಾಗಿ ನಿಲ್ಲೋಕೆ ರವಿಯೆಂಬ ಉಷೆ 
ಅವಳತ್ತ ಸಾಗೆನ್ನೋ ಮನಸಿನ ನಿಶೆ, ಪ್ರೀತಿಯ ನಶೆ ..


ನನ್ನಲ್ಲಿ ಸೇರೋಕೆ ಮನಸಾಗದೆ ? ಹೊಸ ಚಿಗುರಿಗೆ ಉಸಿರು ನಿನಾಗದೆ ..
ನೀನೆ ತಂಪು, ನಿನಗೇಕೆ ತಂಪು ??
ಬಾ ನನ್ನ ಸನ್ನಿದಿಗೆ ಶ್ವೇತಾಂಬರಿ , ಕಾಯುತ್ತ ನಿಂತಿಹಳು ಗೋಧಾವರಿ.
ಸಖಿಯು ನೀನೆ, ಸಂಗಾತವೂ ನೀನೆ
ಮುನ್ನುಡಿಯ ಸಾಲು ಬೇಕಾಗಿದೆ, ಪಲ್ಲವಿಯ ನಾ ಬರೆದು ಇತ್ತಾಗಿದೆ.  

 
ಉಸಿರೇ ಬದುಕು, ಬಾವಕ್ಕೇ ಬದುಕು ತೆರೆಮರೆಯ ಆಟಕ್ಕೆ ಸಮಯ ಎಲ್ಲಿದೆ ?
ಮುಗಿಲೆತ್ತರದ ಜೀವನ ಕೈ ಬಿಸಿದೆ .  
ರಸವೇ ಜನನ, ವಿರಸವೇ ಮರಣ, ಸಮರಸವೆ ಜೀವನ ತಿಳಿದಾಗಿದೆ
ಮಳೆಹನಿಯಲಿ ಬುವಿಯು ಮಿಂದಾಗಿದೆ , ಅವಳಿಗ ಬಳಿ ನಿಂದು ನಲಿದಾಗಿದೆ
 
ಮಳೆಯ ಹನಿಯೊಂದು ನೆಲ ಸೇರಿದೆ
ಹಸಿರಾ ಉಸಿರಿಗೆ ಜೀವ ನೀಡಿದೆ 
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಆನಂದ ಭಾಷ್ಪಕ್ಕು ಹ್ರದಯ ಮಿಡಿದಿದೆ.