Sunday, June 23, 2013

ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ

ಮನಸೆಕೋ ಹಾಡಿದೆ ಈ ಹಾಡನು
ನೆನಪಿಸಿದೆ ಮಳೆನಿಂತ ಜಾಡೊಂದನು
ಮಿಂಚಿ ಮರೆಯಾದ ನಿನ್ನಯಾ ನಗು
ಕಿವಿಮುಚ್ಹೋ ಮೊದಲೇನೆ ಕೇಳುವಾ ಗುಡುಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಹಗಲಲ್ಲೊ, ಇರುಳಲ್ಲೋ ಒಮ್ಮೆ ಮುದ್ದಿಸು
ಸಾಕಾದ ಏಕಾಂತ ನೀ ತಪ್ಪಿಸು
ಅಭಿಮಂತ್ರಿಸು, ಆಮಂತ್ರಿಸು ..
ಬಯಸಿರುವಾ ತುಟಿಗಳಾ ಒಮ್ಮೆ ಚುಂಬಿಸು ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ನಲ್ಲೆ, ನಲ್ಲೆ ..
ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ
ನೀ ನಡೆದ ದಾರಿಯ ಸವೆಯಬಲ್ಲೆ
ನಿಟ್ಟುಸಿರ ಬಿಡಲೊಮ್ಮೆ ನಿಲ್ಲೆ ಅಲ್ಲೇ ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಏಕಾಂತ ಸಾಹಿತ್ಯ ಸಾನಿಧ್ಯ ತೊರೆದು
ಸಖಿಗೀತ ಮೂಡಿಸುವೆ ನಿನ್ನ ಚಿತ್ರ ಬರೆದು
ಸ್ವಲ್ಪವೇ ಜಾರಬಹುದು, ನಿನ್ನ ಛಾಯೆಯ ಸೆರಗು
ಕೊಡು ಕೊಡುತಾ ನಿನ ಅಂದಕೆ ಇನ್ನಷ್ಟು ಮೆರಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...


2 comments:

  1. ವಿರಹಕೂ ಮೀರಿದ ಭಾವವು ಇಲ್ಲಿ ಅಕ್ಷರವಾಗಿದೆ.
    http://badari-poems.blogspot.in

    ReplyDelete
  2. ವಿರಹಕು ಮೀರಿದ ಭಾವವಿದೆ ಇದರಲಿ ಸೆಳೆದುದು ಅದೇ ನನಗೆ.

    ReplyDelete