Saturday, March 19, 2016

ಖತರ್ನಾಕ್ ಕಾದಂಬರಿ- ಅಧ್ಯಾಯ ೧

        ಖತರ್ನಾಕ್ ಕಾದಂಬರಿ 

          ನಮ್ಮ ನಿಮ್ಮ ನಡುವೆ...                                                          

ಅಧ್ಯಾಯ ೧

 ಸಂಜೆ ನಾಲ್ಕರ ಸಮಯ. ದೆಹಲಿಯ ರಸ್ತೆಯಲ್ಲಿ ವಾಹನ ಸಂಚಾರ ಜೋರಾಗಿತ್ತು. ದೆಹಲಿಯೆಂಬುದು ರಾಜಕಾರಣಿಗಳ ತವರುಮನೆ. ಪ್ರತಿಯೊಬ್ಬ V.I.P. ಸಂಚಾರ ಮಾಡುವಾಗಲೂ ಜನಸಾಮಾನ್ಯರಿಗೆ ಪರದಾಟವೇ ಗತಿ. ಒಂದಿಲ್ಲೊಂದು ರಸ್ತೆಯಲ್ಲಿ ಜನ ಸಾಮಾನ್ಯರಿಗೆ ನಿಷೇಧ. ಬದಲಿ ರಸ್ತೆಗಳಲ್ಲಿ ವಾಹನ ದಟ್ಟಣೆ, ತುಂಬಿ ನಿಲ್ಲುವ ಕಾರುಗಳ ಭರಾಟೆ. ಇದನ್ನೆಲ್ಲಾ ಸಾಮಾನ್ಯ ಭರಿಸಲೇಬೇಕು. ದೆಹಲಿಯ ಜನ ರೂಢಿಸಿಕೊಂಡಿದ್ದಾರೆ ಕೂಡ. 

ಈಗಲೂ ಕೂಡಾ ಅಂಥಹದೇ ಪರಿಸ್ಥಿತಿ ಏರ್ಪಟ್ಟಿತ್ತು. ದೆಹಲಿ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿ NH-24 ನಲ್ಲಿ ಅಡ್ಡ ರಸ್ತೆಗಳಿಂದ ಬರುವ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಯಾವಾಗಲೂ ಜನ ಭರಾಟೆಯಿಂದ ತುಂಬಿರುತ್ತಿದ್ದ Highway ಈಗ ಖಾಲಿ ಹೊಡೆಯುತ್ತಿತ್ತು. ಯಾವುದೋ ದೊಡ್ಡ ಮನುಷ್ಯ ಹೋಗುತ್ತಾನೆ, ಇನ್ನರ್ಧ ಘಂಟೆ ಇದೇ ಗತಿ ಎಂದು ಗೊಣಗುತ್ತ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಪಕ್ಕದಲ್ಲಿರುವ ಸಣ್ಣ ಗೂಡಂಗಡಿಗಳಲ್ಲಿ ಚಾ ಹೀರುತ್ತ ನಿಂತಿದ್ದರು ಜನ.
ಪೋಲಿಸರು ಕಣ್ತಪ್ಪಿಸಿ ಕದ್ದು ಗಾಡಿ ಓಡಿಸುವವರ ಹಿಂದೆ ಚಿರತೆಗಳಂತೆ ಬಿದ್ದು ನಾಲ್ಕು ಬಾರಿಸಿ ಕಳಿಸುತ್ತಿದ್ದರು. ರಸ್ತೆಯ ಉದ್ದಕ್ಕೂ ಪೋಲಿಸರ ಸರಪಳಿಯೇ ಏರ್ಪಟ್ಟಿತ್ತು. ಪ್ರಧಾನಿಯೋ, ರಾಷ್ಟೃಪತಿಯೋ ಹೋಗುತ್ತಿದ್ದಾರೆ ಎಂದುಕೊಂಡರು ಜನ. ಸಣ್ಣ ಪುಟ್ಟ V.I.P. ಗಳಿಗೆ ಇಷ್ಟು ವ್ಯವಸ್ಥೆ ನೀಡುವುದು ಕಷ್ಟ ಹಿಂದೂಸ್ಥಾನದಲ್ಲಿ. 
ಪೋಲಿಸರು ತಮಗೆ ಬಂದ ಕರ್ತವ್ಯವನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದರೆ ವಿನಃ ಯಾರು ಈ ದಾರಿಯಾಗಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತಲೆ ಕೆಡಿಸಿಕೊಂಡರೂ ಅವರವರೆಗೆ ಬರುವ ವಿಷಯವಲ್ಲ ಅದು. ದೊಡ್ಡ ಜನ ಹೋಗುವಾಗ ಯಾರು ಹೋಗುತ್ತಿದ್ದಾರೆ ಮತ್ತು ಯಾವ ಕಾರಿನಲ್ಲಿ ಹೋಗುತ್ತಿದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡುತ್ತಾರೆ. ಕೆಲವೇ ಬೆರಳೆಣಿಕೆಯಷ್ಟು ಮೇಲ್ದರ್ಜೆಯ ಅಧಿಕಾರಿಗಳು ಎಲ್ಲವನ್ನು ತಿಳಿದುಕೊಂಡು ಬೇಕಾದ ಸಿದ್ಧತೆ ಮಾಡಿರುತ್ತಾರೆ. 
ಅಲ್ಲಲ್ಲಿ ಗುಂಪಾಗಿ ನಿಂತ ಜನ, ರಾಜಕಾರಣಿಗಳನ್ನು, ತಮ್ಮನ್ನು ಹೀಗೆ ಅಡ್ಡ ಹಾಕಿ ನಿಲ್ಲಿಸಿದ ಪೋಲಿಸರನ್ನೂ ಹೀನಾಯಮಾನವಾಗಿ ಬಯ್ಯುತ್ತ ನಿಂತಿದ್ದರು. ಪುಣ್ಯಾತ್ಮ ಬೇಗ ತೊಲಗಿದರೆ ಸಾಕು. ತಮ್ಮ ತಮ್ಮ ಕೆಲಸಗಳಿಗೆ ಮುಂದುವರೆಯಬಹುದೆಂಬುದು ಅವರ ಯೋಚನೆ. 
ಅದೇ ಸಮಯಕ್ಕೆ ಸರಿಯಾಗಿ Highway ಇಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ, ಇನ್ನೂ ಜನ ಬಂದುಳಿಯದ ಮೂವತ್ತು ಅಂತಸ್ತಿನ ಕಟ್ಟಡದ ಟೆರೆಸ್ ನಲ್ಲಿ ಪ್ರಶಾಂತವಾಗಿ ಕುಳಿತಿದ್ದ ಗರುಡ. ಅವನ ನಿಜವಾದ ಹೆಸರು ಪಾಸ್ ಪೋರ್ಟ್ ನಲ್ಲಿಯೂ ಕೂಡ ಇಲ್ಲ. ಭೂಗತ ಜಗತ್ತಿನಲ್ಲಿ ಅವನಿಗೆ ಗರುಡ ಎಂದೇ ಹೆಸರು. ಅವನ ಕಣ್ಣುಗಳಿಗೂ, ಹದ್ದಿನ ಕಣ್ಣುಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ಎಲ್ಲರ ಅಂಬೋಣ. ಗರುಡನ ಕಣ್ಣುಗಳಲ್ಲಿ ಕ್ರೂರತೆಯಿಲ್ಲ, ತೀಕ್ಷ್ಣವಾದ ಸೌಮ್ಯತೆ. ಮಂಜುಗಡ್ಡೆಯಲ್ಲಿ ಹುದುಗಿರುವ ಬೆಂಕಿಯಂತೆ.
ಗರುಡನ ಬಗ್ಗೆ ಇನ್ನಷ್ಟು ತಿಳಿಯಬೇಕೆಂದರೆ ಸ್ವಲ್ಪ ಹಿಂದೆ ಹೋಗಬೇಕು. ಅದು ಫೆಬ್ರವರಿ ೨, ೨೦೧೩. ಅಮೇರಿಕದಲ್ಲಿ ಕ್ರಿಸ್ ಕೆಯ್ಲ್ ಎಂಬ ದೈತ್ಯ ವ್ಯಕ್ತಿ ಸಹೋದ್ಯೋಗಿಯ ಗುಂಡೇಟಿನಿಂದಲೇ ಸತ್ತು ಮಲಗಿದ ದಿನ. ಆತ ಅಮೇರಿಕಾ ಕಂಡ ಅದ್ಭುತ Sniper. ಅಮೇರಿಕಾದ ನೇವಿಯಲ್ಲಿ ಯುದ್ಧದ ತರಬೇತಿ ಪಡೆದ ಆತ ತನ್ನ ಹತ್ತು ವರ್ಷದ ಸೇವೆಯಲ್ಲಿ ಬಲಿತೆಗೆದುಕೊಂಡಿದ್ದು ಬರೋಬ್ಬರಿ 160 ಜನರನ್ನು. ಅದಕ್ಕೆ ಎಂಟೆದೆ ಬೇಕು, ಎಂಟೆದೆ ಅಷ್ಟೆ ಇದ್ದರೆ ಸಾಲದು, ಗುರಿ ತಪ್ಪದೆ ಟ್ರಿಗರ್ ಒತ್ತುವ ಛಾತಿ ಬೇಕು.
2003 ರಲ್ಲಿ ಪ್ರಾರಂಭವಾದ ಅಮೇರಿಕಾ ಮತ್ತು ಇರಾಕ್ ನಡುವಿನ ಯುದ್ಧದಲ್ಲಿ ಇದೇ ಕ್ರಿಸ್ ಕೆಯ್ಲ್ ನಿಜವಾದ ಹೀರೊ ಆಗಿದ್ದ. ಆತ Sniper ಹಿಡಿದು ನಿಂತನೆಂದರೆ ಎಷ್ಟೇ ದೂರದ ಬೇಟೆಯನ್ನಾದರೂ ಬಡಿದು ಕೆಳಗುರುಳಿಸಿಬಿಡುತ್ತಿದ್ದ. ತಾನು ಎದುರಿಗಿದ್ದು ತನ್ನ ಹಿಂದಿರುವ ಟೀಮಿಗೆ ದಾರಿ ಮಾಡಿಕೊಡುವುದೇ ಅವನ ಕೆಲಸ. ತನ್ನೆದೆಯೆಡೆಗೆ ನುಗ್ಗಿ ಬರುವ ಬುಲೆಟ್ ಗಳಿಂದ ತಪ್ಪಿಸಿಕೊಂಡು ಅದೇ ದಿಕ್ಕಿಗೆ ಆತ ಗುರಿ ಹಿಡಿದನೆಂದರೆ ಅದೇ ಕೊನೆ ಮತ್ತೆ ಆ ಕಡೆಯಿಂದ ಗುಂಡು ಸಿಡಿದು ಬರುತ್ತಿರಲಿಲ್ಲ. ಇಂತಹ ಕ್ರಿಸ್ ಕೆಯ್ಲ್ 2011 ರಲ್ಲಿ ಯುದ್ಧ ಮುಗಿಸಿ ಬಂದಾಗ ಅವನಿಗೆ ಸಿಕ್ಕ ಬಿರುದುಗಳು, ಮೆಡಲ್ ಗಳು ಅಷ್ಟಿಷ್ಟಲ್ಲ. ರಾತ್ರೋ ರಾತ್ರಿ ಆತನೇನು ಹೀರೊ ಆಗಿರಲಿಲ್ಲ. ಬರೋಬ್ಬರಿ ಹತ್ತು ವರ್ಷಗಳು, ಅವನು ಸಾವಿನೊಂದಿಗೆ ಸರಸವಾಡಿದ್ದು. Sniper ಜಗತ್ತಿನ ಆದರ್ಶವಾಗಿ ನಿಂತಿದ್ದ ಅಮೇರಿಕನ್ ಸ್ನೈಪರ್ ಕ್ರಿಸ್ ಕೆಯ್ಲ್. 
ಇಂಥ ದೈತ್ಯ ವ್ಯಕ್ತಿಯೊಬ್ಬ ಫೆಬ್ರವರಿ 2, 2013. ರಲ್ಲಿ ಗುಂಡೇಟು ತಿಂದು ಸತ್ತಿದ್ದ. ಅದು ಸಹೋದ್ಯೋಗಿಯೊಬ್ಬನ ತಲೆಹಿಡುಕತನದಿಂದ.ಅಂದು ಸ್ನೈಪರ್ ಜಗತ್ತೇ ಕಣ್ಣೀರಿಟ್ಟ ದಿನ. ಎರಡೇ ದಿನದ ನಂತರದ ಅಂತಿಮ ದರ್ಶನದ ದಿನ ಇಡೀ ಜಗತ್ತಿನ ಅತ್ಯುತ್ತಮ ಸ್ನೈಪರ್ ಗಳೆಲ್ಲ ಬಂದು ಸೇರಿದ್ದರು. ಅಲ್ಲಿದ್ದ ಇದೇ ಗರುಡ. ಎಂದೂ ಅಳದ ಗರುಡನ ಕಣ್ಣು ತುಂಬಿತ್ತು ಅಂದು. ಅಮೇರಿಕನ್ ಮಿಲಿಟರಿಯ ಗುಂಪೇ ಅಲ್ಲಿ ತುಂಬಿದ್ದಾಗ ಹೀಗೊಂದು ಅನಾಮಿಕ ವ್ಯಕ್ತಿ ಅಲ್ಲ ಹೋಗಿದ್ದಾನೆ ಎಂದರೆ ಅದು ಕತ್ತಲ ಜಗತ್ತಿನ ಸಾಮರ್ಥ್ಯ ಎಂತಹದು ಎಂಬುದನ್ನು ತೋರಿಸುತ್ತದೆ. 
ಒಂದು ಬಿಳಿ ಗುಲಾಬಿಯನ್ನು ಕ್ರಿಸ್ ನ ಪಾರ್ಥಿವ ಶರೀರದ ಮೇಲಿಟ್ಟು ಗರುಡ ಅಲ್ಲಿಂದ ದುಡು ದುಡು ಹೊರನಡೆದು ಬಿಟ್ಟ. ಒಬ್ಬ ಅದ್ಭುತ ಶಿಷ್ಯನನ್ನು ಕಳೆದುಕೊಂಡ ದುಃಖ ಅವನನ್ನು ಕಾಡಿತ್ತು. ಕ್ರಿಸ್ ಕೆಯ್ಲ್ 1998 ರಲ್ಲಿ ಆರ್ಮಿ ಸೇರುವ ಮೊದಲೇ ತಾನೊಬ್ಬ ಸ್ನೈಪರ್ ಆಗಬೇಕೆಂದು ತೀರ್ಮಾನಿಸಿದ್ದ. ಅದಕ್ಕಾಗಿ ಆತ ಜಗತ್ತಿನ ಹೆಸರಾಂತ ಸ್ನೈಪರ್ ಗಳ ಮನೆ ಬಾಗಿಲನ್ನು ತಟ್ಟಿದ್ದ. ಆಗಿನ್ನೂ ಗರುಡ ಕತ್ತಲ ದುನಿಯಾದಲ್ಲಿ ತನ್ನನ್ನು ಗುರುತಿಸಿಕೊಂಡ ಮನುಷ್ಯನಾಗಿರಲಿಲ್ಲ. 
ಕ್ರಿಸ್ ನ ಕಣ್ಣುಗಳನ್ನು ನೋಡಿದೊಡನೆ ತನ್ನ ಕಣ್ಣುಗಳನ್ನೇ ಕನ್ನಡಿಯಲ್ಲಿ ನೋಡಿಕೊಂಡಂತಾಗಿತ್ತು ಗರುಡನಿಗೆ. ಆತನ ಸೂಕ್ಷ್ಮ ಕಣ್ಣುಗಳು, ಕಲಿಯುವಿಕೆಯ ಬಗೆಗಿನ ತುಡಿತ ಗರುಡನಿಗೆ ಹಿಡಿಸಿತು. ಆ ದಿನದಿಂದ ಸರಿಯಾಗಿ ಒಂದು ವರ್ಷ ಕ್ರಿಸ್ ಕೆಯ್ಲ್ ಗರುಡನ ಪಟ್ಟಾ ಶಿಷ್ಯನಾಗಿದ್ದ. 1999 ರಲ್ಲಿ ಗರುಡ ಇದ್ದಕ್ಕಿದ್ದಂತೆ ಮಾಯವಾಗಿದ್ದ. ಕ್ರಿಸ್ ಅವನನ್ನು ಹುಡುಕಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿತ್ತು. ಅದಾದ ನಂತರ ಕ್ರಿಸ್ ಅಮೇರಿಕನ್ ನೇವಿಯಲ್ಲಿ ಸೇರಿ ಕೊನೆಗೆ ನಡೆದದ್ದೆಲ್ಲಾ ಈಗ ಒಂದು ಇತಿಹಾಸ.
ಅಂತಹ ಕ್ರಿಸ್ ಕೆಯ್ಲ್ ನ ಗುರು ಈ ಗರುಡ. ಗರುಡ ಕಣ್ಣಿನಲ್ಲಿ ಮಾತನಾಡುವ ಮನುಷ್ಯ. ಅವನ ಕಣ್ಣುಗಳು, ಕೆರಳಿ ಬುಸ್ ಗುಡುವ ಕರಿ ಸರ್ಪವನ್ನು ಕೂಡ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸಮ್ಮೋಹನಗೊಳಿಸುವ ಕಪ್ಪಿತ್ತು. ಆ ಕಪ್ಪಿನಲ್ಲಿ ಎಂದೂ ತಪ್ಪದ ಗುರಿಯಿತ್ತು. ಅದೇ ಅವನನ್ನು ಇಡೀ ಪ್ರಪಂಚದ ಗುರಿ ತಪ್ಪದ Sniper ಎಂಬ ಹೆಗ್ಗಳಿಕೆ ನೀಡಿ ನಿಲ್ಲಿಸಿದ್ದು. ಇದು ಭೂಗತ ಜಗತ್ತಿಗೆ ಮಾತ್ರ ತಿಳಿದಿರುವ ಸತ್ಯ.
ಆರಡಿ, ಕೋಲುಮುಖ, ಮುಖದಲ್ಲಿ ತುಂಬಿದ ದೃಢತೆ, ಕೇರ್ ಲೆಸ್ ಆಗಿ ಹಾರಾಡಿಕೊಂಡಿದ್ದ ಕೂದಲು, ಪ್ರತಿ ನಡಿಗೆಯಲ್ಲೂ ಚುರುಕುತನ. ಮಧ್ಯ ವಯಸ್ಸಿನ ಗರುಡ ಈಗಲೂ ಕೂಡ ಹದಿಹರೆಯದ ಹೆಣ್ಣುಗಳ ಫೇವರಿಟ್ ಆಗುತ್ತಾನೆ ಎನ್ನಬಹುದು. ಆತನ ಮೈಕಟ್ಟೆ ಅಂತಹುದು. ಎಲ್ಲಕ್ಕಿಂತ ಹೆಚ್ಚಾಗಿ ಮತ್ತವೇ ಕಣ್ಣುಗಳು, ಸೂಜಿಗಲ್ಲಿನ ಸೆಳೆತದಂತಹ ಕಣ್ಣುಗಳು. 
ಗರುಡ ಸಮಯ ನೋಡಿಕೊಂಡ, ಅರ್ಧ ಘಂಟೆಯಾಗಿತ್ತು ಆತ ಆ ಮೂವತ್ತು ಅಂತಸ್ತಿನ ಕಟ್ಟಡದ ಟೆರೆಸ್ ನಲ್ಲಿ ಕುಳಿತು. ಆತನ ಮುಖದಲ್ಲಿ ತುಂಬಿ ತುಳುಕುವ ಪ್ರಶಾಂತತೆ. ಸುನಾಮಿ ಬರುವ ಮೊದಲಿನ ಸಾಗರದ ಪ್ರಶಾಂತತೆ. ಆತ ತನ್ನ ಕಪ್ಪು ಬ್ಯಾಗಿನಿಂದ ಸಿಗರೇಟ್ ಒಂದನ್ನು ತೆಗೆದು ಹಚ್ಚಿ ಮೇಜಿನ ಮೇಲಿಟ್ಟ!! ಅವನಿಗೆ ಬೇಕಾದ ವಸ್ತುಗಳನ್ನು ಆತ ಮೊದಲೇ ಪಡೆದಿದ್ದ. ಈ ಸಮಯಕ್ಕೆ ಸರಿಯಾಗಿ ಇಂಥಹ ವಸ್ತುಗಳು ಇಂಥಲ್ಲಿಯೇ ಇರಬೇಕು ನಿಮ್ಮ ಕೆಲಸ ಆಗುತ್ತದೆ ಎಂದು ಮೊದಲೇ ಹೇಳಿದ್ದ. ಭೂಗತ ಜಗತ್ತಿನಲ್ಲಿ ಮಾತು ಬಹಳ ಕಡಿಮೆ. ಬಹಳ ಮಾತನಾಡುವವನು ಬಹಳ ಬೇಗ ಜಗತ್ತಿನಿಂದ ಜಾಗ ಬಿಡುತ್ತಾರೆ. ಎಷ್ಟು ಗುಟ್ಟು ನಿನ್ನೊಳಗೆ ಉಳಿಯುತ್ತದೆಯೋ, ಎಷ್ಟು ಸಣ್ಣ ವಾಕ್ಯವನ್ನು ನೀನು ಸಮಗ್ರವಾಗಿ ಅರ್ಥಮಾಡಿಕೊಳ್ಳುತ್ತೀಯೋ ಎನ್ನುವುದರ ಮೇಲೆ ನಿನ್ನ ಭವಿಷ್ಯ ಬದಲಾಗುತ್ತದೆ ಅಲ್ಲಿ. 
ಸಿಗರೇಟ್ ಉರಿದು ಅದರ ಹೋಗೆ ಹೋಗುವ ದಿಕ್ಕು ಮತ್ತು ವೇಗವನ್ನೇ ಎರಡು ನಿಮಿಷ ನೋಡುತ್ತ ನಿಂತ ಗರುಡ. ಸಮಯ ಹತ್ತಿರವಾಗಿದೆ ಎನ್ನಿಸಿತು ಗರುಡನಿಗೆ. 
ಬ್ಯಾಗಿನಿಂದ Sniper ನ ಬಿಡಿಭಾಗಗಳನ್ನು ತೆಗೆದು ಜೋಡಿಸಿದ. ಅದೂ ಕೇವಲ ಒಂದೂವರೆ ನಿಮಿಷದಲ್ಲಿ. ಅದೊಂದು ಹುಚ್ಚು ಅವನಿಗೆ. Fastest assembler of sniper in the world. ಈ ವೇಗ ಬೇಕಾ ಎಂದು ಕೆಲವೊಮ್ಮೆ ಅವನೇ ಯೋಚಿಸುತ್ತಿದ್ದ. ಒಂದು ಸಣ್ಣ ತಪ್ಪು ಕೂಡ ನನ್ನನ್ನು ಸಾವಿನ ಬಾಗಿಲಿನಲ್ಲಿ ನಿಲ್ಲಿಸಬಲ್ಲದು ಎಂಬುದು ಅವನಿಗೆ ತಿಳಿಯದೆ ಏನಿಲ್ಲ. ಆದರೆ ಅದೊಂದು ಚಾಳಿ ಬಿಟ್ಟಿರಲಿಲ್ಲ ಆತ. McMillan Tac-50. Sniper ಗಳ ಕನಸಿನ ದೇವತೆ ಅದು.
ಮಿರಿ ಮಿರಿ ಮಿಂಚುವ ಕಪ್ಪು ಸ್ನೈಪರ್ ಅದು. ಇದೇ ಮಾಡೆಲ್ ನ ಸ್ನೈಪರ್ ಉಪಯೋಗಿಸಿ Rob Furlong 2400 ಮೀಟರ್ ದೂರ ಕುಳಿತು ಶತ್ರುವಿನ ಎದೆಯಲ್ಲಿ ಗುಂಡಿಳಿಸಿಬಿಟ್ಟಿದ್ದ. ಈಗ ಅದೇ ಕಪ್ಪು ಸುಂದರಿಯನ್ನು ಮೈದಡವಿ ಆ ಮೇಜಿನ ಮೇಲೆ ಸರಿಯಾಗಿ ಜೋಡಿಸಿ ಅದರ ಬೈನಾಕ್ಯುಲರ್ ನಲ್ಲಿ ಸುಮ್ಮನೆ ಒಮ್ಮೆ ಸುತ್ತಲೂ ದೃಷ್ಟಿ ಬೀರಿದ. ಎರಡು, ಮೂರು, ನಾಲ್ಕು ಕಿಲೊಮೀಟರ್ ಗಳ ದೃಶ್ಯವನ್ನು ಕೈಗೆ ಸಿಗುವಷ್ಟೇ ಹತ್ತಿರದಲ್ಲಿರುವಂತೆ ಭ್ರಮೆ ಹುಟ್ಟಿಸುತ್ತಿದ್ದಳು ಆ ಕಪ್ಪು ಸುಂದರಿ. 
ಒಂದು ಗಾಢವಾದ ನಿಟ್ಟುಸಿರು ಬಿಟ್ಟು ಮತ್ತೊಮ್ಮೆ ತನ್ನ ಕಣ್ಣನ್ನು ಬೈನಾಕ್ಯುಲರ್ ನ ಗ್ಲಾಸ್ ಮೇಲಿಟ್ಟ ಗರುಡ. ತನಗೆ ಹುಟ್ಟುತ್ತಲೇ ಸಿದ್ಧಿಸಿದ ಕಲೆಯೆನೋ ಎಂಬಂತೆ MacMillan Adjuster ಮೇಲೆ ಆತನ ಕೈ ಹರಿದಾಡುತ್ತಿತ್ತು. ದೀರ್ಘವಾದ ಉಸಿರಾಟ ಮಾಡುತ್ತಿದ್ದ ಗರುಡ. ಸಮಯ ಹತ್ತಿರವಾದಂತೆಲ್ಲ ಆತನ ಮನಸ್ಸು ಒಂದೇ ಕಡೆ ಕೇಂದ್ರೀಕೃತವಾಗುತ್ತಿತ್ತು. ಆತ ಹಚ್ಚಿಟ್ಟ ಸಿಗರೇಟ್ ಉರಿದು ಮುಗಿದಿತ್ತು. ಮತ್ತೊಂದು ಸಿಗರೇಟ್ ಹಚ್ಚಿ ಮೇಜಿನ ಮೇಲಿಟ್ಟ. ಗರುಡ ಯಾವತ್ತೂ ಸಿಗರೇಟ್ ಸೇದಿದವನಲ್ಲ. ಆತನಿಗೆ ಗಾಳಿಯ ದಿಕ್ಕು ಮತ್ತು ಚಲನೆಯ ವೇಗ ತಿಳಿದುಕೊಳ್ಳಲಾಗಿಯೇ ಆ ಸಿಗರೇಟ್. ಎಲ್ಲವೂ ಸರಿಯಿದ್ದಂತೆ ಅನ್ನಿಸಿತು ಗರುಡನಿಗೆ. ಅಲ್ಲಿಂದ ಒಂದೂವರೆ ಕಿಲೊಮೀಟರ್ ದೂರದ ಹೈವೆಯ ಮೇಲೆ ನೆಟ್ಟಿತ್ತು ಅವನ ದೃಷ್ಟಿ. 
ರಸ್ತೆಯ ಪಕ್ಕದಲ್ಲಿ ಗುಂಪು-ಗುಂಪಾಗಿ ಹರಡಿಕೊಂಡಿದ್ದ ಮರಗಳು ಕೂಡ ಇದ್ದವು, ಬದಿಯಲ್ಲಿಯೇ ಬಯಲು ಕೂಡ. ಬಯಲಿದ್ದ ಜಾಗವಾದರೆ ಗರುಡನಿಗೆ ಗುರಿ ಇಡುವುದು ಸುಲಭ. ಆದರೆ ಮರದ ಗುಂಪೆಂದರೆ ಮರಗಳ ಪ್ರತಿಯೊಂದೂ ರೆಂಬೆ,ಕೊಂಬೆ, ಎಲೆ ಅಲುಗಾಡುವುದನ್ನು ಕೂಡ ತಪ್ಪಿಸಿ ಗುರಿ ಇಡಬೇಕು, ಅದು ಬಹಳ ಕಷ್ಟದ ಕೆಲಸ. ಗರುಡ ಮಾತ್ರ ಆ ಮರಗಿಡಗಳ ಮರೆಯನ್ನೇ ಆರಿಸಿದ. ಯಾಕೆಂದರೆ ಒಂದು ಕ್ಷಣ ಏನಾಯಿತು ಎಂದು ಅರಿಯಲು ಪೋಲಿಸರಿಗೆ ಸಮಯ ಬೇಕು. ಮರಗಳ ಎಡೆಯಿಂದ ಏನಾದರೂ ಬಂದಿರಬಹುದು ಎಂದು ಅವರನ್ನು Confuse ಮಾಡಲಷ್ಟೆ ಸಂಚು. ಬಯಲಿನಲ್ಲಿ ಒಮ್ಮೆ ಕಣ್ಣು ಹಾಯಿಸಿದರೆ ಕಾಣುವುದೇ ಎತ್ತರದ ಈ ಬಿಲ್ಡಿಂಗ್.ಇಂತಹ ಸಣ್ಣ ಸಣ್ಣ ಯೋಚನೆಗಳೇ ಅವನನ್ನು ಭೂಗತ ಲೋಕದ Sniper ಸಾಮ್ರಾಟನನ್ನಾಗಿ ಮಾಡಿತ್ತು. 
ಗರುಡ ಹೈವೆಯತ್ತಲೇ ದೃಷ್ಟಿ ನೆಟ್ಟಿದ್ದ, ಯಾವುದೇ ಕ್ಷಣದಲ್ಲೂ ಕೂಡ ಅವನ ಗುರಿ ಈ ಕಡೆ ಬರಬಹುದು ಎಂದು. ಆತನ ಬೈನ್ಯಾಕ್ಯುಲರ್ ನಲ್ಲಿ ಅಸ್ಪಷ್ಟವಾಗಿ ೫ ಕಾರುಗಳು ಕಂಡವು. ಆತನಿಗೆ ನಿಖರವಾಗಿ ಗೊತ್ತು ತನ್ನ ಗುರಿ ಯಾವ ಕಾರಿನಲ್ಲಿ, ಯಾವ ಸೀಟಿನಲ್ಲಿ ಕುಳಿತಿದ್ದಾಳೆ ಎಂದು. ಅವೆಲ್ಲ ಮಾಹಿತಿಗಳು ಇತರರಿಗೆ ಸಿಗುವುದು ಕಷ್ಟ. ಆದರೆ ಕತ್ತಲ ಜಗತ್ತಿಗೆ ಅಬೇಧ್ಯ ಕೋಟೆಯೆಂಬುದೇ ಇಲ್ಲ. ದುಡ್ಡು ಎಲ್ಲವನ್ನೂ ಬದಲಿಸುತ್ತದೆ, ಮನುಷ್ಯನನ್ನು ಮತ್ತು ಮನುಷ್ಯನ ನಿಯತ್ತನ್ನು ಕೂಡ. 
Adjuster ಮೇಲೆ ಕೈ ಆಡಿಸುತ್ತಿದ್ದ ಗರುಡ. ಆರು ಕಿಲೋಮೀಟರ್. ರಸ್ತೆ ಖಾಲಿ ಇರುವುದರಿಂದ ಮೂರರಿಂದ ನಾಲ್ಕು ನಿಮಿಷ ಅಷ್ಟೆ. ಗರುಡ ಬರುತ್ತಿರುವ ಕಾರುಗಳ ವೇಗವನ್ನೇ ನೋಡುತ್ತಿದ್ದ. ತಿರುಗಿ ಒಮ್ಮೆ ಹೊಗೆಯಾಡುತ್ತಿದ್ದ ಸಿಗರೇಟ್ ನೋಡಿದ. ಅವನ ಮನದಲ್ಲಿ ನೂರಾರು ಲೆಕ್ಕಗಳು, ತಾಳೆಗಳು. 
ಅನುಭವವಿಲ್ಲದವರು ಇಂತಹ ಕೆಲಸ ಮಾಡುವಾಗ Tension ಆಗುತ್ತಾರೆ. ಅದರಿಂದ ಅನಾಹುತಗಳೇ ಹೆಚ್ಚು. ಅದರಲ್ಲೇ ಪಳಗಿದವರು ತಮ್ಮ ಗುರಿ ಹತ್ತಿರ ಬಂದಂತೆಲ್ಲ ಪ್ರಶಾಂತ ಮನಸ್ಕರಾಗುತ್ತಾರೆ. ಗರುಡನ ಉಸಿರಿನಲ್ಲಿ ಯಾವುದೇ ಏರಿಳಿತವಿಲ್ಲ. ತಲೆಯಲ್ಲಿ ಮಾತ್ರ ನೂರು ಕುದುರೆಗಳು ಚಲಿಸುವಷ್ಟು ವೇಗವಾದ ಲೆಕ್ಕ ಜರುಗುತ್ತಿತ್ತು. 
ಗಾಳಿ ಚಲಿಸುತ್ತಿರುವ ದಿಕ್ಕು, ಅದರ ವೇಗ, ಬರುತ್ತಿರುವ ಕಾರಿನ ವೇಗ, ಗಾಳಿಯ ಸಾಂದ್ರತೆ, ನಿಂತಿರುವ ಕಾಲ, ನಿಂತಿರುವ ಎತ್ತರ, ಎತ್ತರದಿಂದ ತಗ್ಗಿನ ಕಡೆ ಬುಲೆಟ್ ಸಾಗುವಾಗಿನ ಸಾಂದ್ರತೆ ಎಲ್ಲವನ್ನೂ ಗರುಡ ಯೋಚಿಸುತ್ತಿದ್ದ. ಇವಿಷ್ಟನ್ನೆ ಗರುಡ ಯೋಚಿಸಿದ್ದರೆ ಆತ ಅಷ್ಟು ನಿಖರವಾಗಿ ಗುರಿ ಇಡಲು ಸಾಧ್ಯವೇ? 
ಭೂಮಿ ತನ್ನ ಸುತ್ತ ತಾನು ತಿರುಗುವುದರಿಂದ ಹಿಡಿದು ಯೋಚಿಸಬೇಕಾಗಿತ್ತು ಗರುಡ. 
ಒಂದು ಸೆಕೆಂಡಿಗೆ 830 ಮೀಟರ್ ಸ್ಪೀಡ್ ನಲಿ ಚಲಿಸುವ ಬುಲೆಟ್, ಒಂದೂವರೆ ಕಿಲೋಮೀಟರ್ ಎಂದರೆ ಪೂರ್ತಿ ಎರಡು ಸೆಕೆಂಡ್ ಗಳಿಗಿಂತ ಕಡಿಮೆ. ಆದರೂ ಆ ಹೊತ್ತಿನಲ್ಲಿ ಭೂಮಿ ಎಷ್ಟು ತಿರುಗಬಲ್ಲದು ಎಂಬುದು ಗುರಿಯ ನಿಖರತೆಯನ್ನು ವ್ಯತ್ಯಾಸಮಾಡಬಲ್ಲದು. 
ಈಗ ಗರುಡನಿಗೆ ಎಲ್ಲವು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೊಂದು ಮೂವತ್ತು ಸೆಕೆಂಡ್ ಅಷ್ಟೆ. ತಾನು ಎಣಿಸಿದ ಜಾಗಕ್ಕೆ ತನ್ನ ಗುರಿ ಬಂದುಬಿಡುತ್ತದೆ. 
ಗರುಡನ ಕಣ್ಣು ರೆಪ್ಪೆ ಮಿಟುಕಿಸದೆ ಬೈನಾಕ್ಯುಲರ್ ನೋಡುತ್ತಿದೆ. ಕ್ಷಣದ ನೂರನೇ ಒಂದು ಭಾಗದಲ್ಲಿ ಟ್ರಿಗ್ಗರ್ ಅದುಮಲು ಬೆರಳು ಸಿದ್ಧವಾಗಿದೆ. 
ಗರುಡನಿಗೆ ಈಗ ಸ್ಪಷ್ಟವಾಗಿ ಕಾಣುತ್ತಿದ್ದಳು ಮರ್ಸಿಡಸ್ ಬೆಂಜ್ ಒಳಗೆ ಕುಳಿತಿರುವ ಪ್ರಿಯಂವದಾ ರಾಜ್. ಇಂಡಿಯಾದ ಕಿಂಗ್ ಮೇಕರ್ ಅವಳೇ. ಪ್ರಧಾನ ಮಂತ್ರಿ, ರಾಷ್ಟ್ರಪತಿಗೆ ಇಲ್ಲದ ಅಧಿಕಾರ ಅವಳಿಗಿದೆ. ಅಂತಹ ಪ್ರಿಯಂವದಾ ರಾಜ್ ಆ ದಾರಿಯಲ್ಲಿ ಹೋಗುತ್ತಿದ್ದಳು. ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಗರುಡ. 
ಹತ್ತು.. ಒಂಬತ್ತು.. ಎಂಟು.. ಗರುಡ ಮನಸ್ಸಿನಲ್ಲಿ ಕೌಂಟ್ ಡೌನ್ ಮಾಡತೊಡಗಿದ. 
ಪ್ರಿಯಂವದಾ ರಾಜ್ ಚಲಿಸುತ್ತಿದ್ದಾಳೆಯೇ? ಚಲಿಸುತ್ತಿದ್ದರೆ ಯಾವ ದಿಕ್ಕಿನಲ್ಲಿ ಚಲಿಸುತ್ತಿದ್ದಾಳೆ? ಕಾರಿನ ವಿಂಡೋ ಗ್ಲಾಸ್ ಗಿರುವ ಪವರ್ ಎಷ್ಟು? ಬುಲೆಟ್ ಗ್ಲಾಸ್ ಗೆ ತಾಗಿದ ಕ್ಷಣ ಬದಲಾಗುವ ಬುಲೆಟ್ ನ ಆಂಗಲ್ ಎಲ್ಲವೂ ಗರುಡನ ಮನಸ್ಸಿನಲ್ಲಿ ಸುಳಿದು ಹೋಗುತ್ತಲೇ ಇತ್ತು. 
ನಾಲ್ಕು.. ಮೂರು.. ಕೈ ಮತ್ತಷ್ಟು ಬಿಗಿಯಿತು ಟ್ರಿಗ್ಗರ್ ಮೇಲೆ. 
ಎರಡು.. ಒಂದು.. 
ಸೊನ್ನೆ ಎಂದು ಯೋಚಿಸಲಿಲ್ಲ ಗರುಡ, ಟ್ರಿಗ್ಗರ್ ಅದುಮಿದ ಅಷ್ಟೆ. 
ಟಪ್-- ಎಂಬ ಸಣ್ಣ ಸದ್ದು.. ಒಂದು ಸಣ್ಣ ಜರ್ಕ್..!!
ಉಸಿರು ಬಿಗಿ ಹಿಡಿದು ಬಿಟ್ಟಕಣ್ಣು ಬಿಟ್ಟೆ ಇದ್ದ ಗರುಡ.
ಇದ್ಯಾವುದು ತಿಳಿಯದೇ ಪ್ರಿಯಂವದಾ ರಾಜ್ ಳ ಕಾರು ಆ ಕ್ಷಣ ಅದೇ ಮರದ ಮರೆಗೆ ಸಾಗಿತು....!!!

 

Monday, July 22, 2013

ನೀ ಸನಿಹಕೆ ಬಂದರೆ ಹ್ರದಯದ ಕತೆ ಏನು ...

ಮತ್ತದೆ ನೆನಪುಗಳು ಗೆಳತಿ ... ಆ ಸುಂದರ ರಾತ್ರಿಯ ಮೆಲಕು ಮನಸಿನ ಕೋಲಿ ಕೊಲಿಗಳಲಿ .... ನಿನ್ನ ಸುಂದರತೆಯನ್ನು ಗಮನಿಸಿದ್ದೆ ಅಂದಿರಬೇಕು ನಾನು ... ನಿನ್ನ ಮನಸಿನ ಸವಿಯಲ್ಲಿ ಕಳೆದು ಹೋಗಿದ್ದ ನಾನು...

ಅದು ಸ್ವಚ್ಚಂದ ಬೆಳದಿಂಗಳ ರಾತ್ರಿ.. ಮೊಡವಿಲ್ಲದ ಆಗಸ..ತಂಪು ಗಾಳಿಯ ಸೋನೆ .... ನಿನ್ನ ಕಾಲಿನ ಮೇಲೆ ಮಲಗಿದ್ದ ನಾನು ನಿನ್ನ ಮುಕವನ್ನೇ ನೋಡುತ್ತಿದ್ದೆ..
ನಿನ್ನ ಮುಂಗುರುಳು ಗಾಳಿಯ ಮೋಡಿಗೆ ಕೀನೆ ಸವರುತ್ತಿತ್ತು .. ತುಟಿಯ ಮೇಲದೆ ಮುಗುಳ್ನಗು ..
ಅದೆಂತ ಆಕರ್ಷಣೆ.. ನನ್ನ ಕೈಗಳು ನಿನ್ನ ಸೊಂಟವ ಬಳಸಿ ಕನವರಿಕೆಯ ಮಡಿಲಲ್ಲಿ ತೇಲುವಂತೆ ಮಾಡುತಿತ್ತು .. ನೀನೇನು ಯೋಚಿಸುತ್ತಿರಬಹುದು ಎಂದು ನಾ ಯೋಚಿಸುತ್ತಿದ್ದೆ ... ನಿನ್ನ ಮಡಿಲಿನ ಸುಖ ... ನಿನ್ನ ಸ್ಪರ್ಶದ ಮೋಡಿ ನನ್ನನ್ನು ಇನ್ನು ಆಳದ ಉನ್ಮಾದತೆಗೆ ತಳ್ಳುತ್ತಿತ್ತು..
ನಿನ್ನ ಪುಟ್ಟ ಪುಟ್ಟ ಕೈ ಬೆರಳುಗಳ ಜೊತೆ ನಾ ಆಟವಾದುತ್ತಿದ್ದೆ.. ನಿನ್ನ ಮುಕವೋ ಕೆಂಪು ಕೆಂಪು.. ನಾಚಿಕೆಯಿಂದಲಾ?!.. ಪುರುಷ ಸ್ಪರ್ಶದಿಂದಲಾ..? ಹೆಣ್ಣಿನ ಮನಸ್ಸು ಅರಿಯುವುದು ಇದಕ್ಕೆ ಕಷ್ಟವೇನೋ ?! ನಾವು ಜಗಳ ಆಡಿದ ದಿನದಲ್ಲೂ ನಿ ಕೆಂಪು ಕೆಂಪು .. ಸರಸವಾಡಿದಾಗಲು ... ಅಷ್ಟೇ .. ನೀ ನನ್ನ ಎದೆಯಲ್ಲಿ ಮುಖ ಇಟ್ಟೆ.. ನನಗೆ ತಿಳಿಯದೆ ನನ್ನ ಕೈಗಳು ನಿನ್ನ ಬಳಸಿ ಲಲ್ಲೆಗರೆದಿದ್ದವು..

ಇ ಸಮ್ಮೋಹನದ ಹಿತದ ಅಂಚಿನಲ್ಲೇ ನನ್ನ ಸಾವಾದರೆ ಎಂದೆನಿಸುತ್ತಿತ್ತು ನನಗೆ .. ನಿನ್ನ ಬಿಸಿಉಸಿರು ನನ್ನ ಎದೆಯಲ್ಲಿ ಹೊಸತನ ತರುತ್ತಿತ್ತು.. ಸನಿಹ ಮುಂಗಾರಿನ ಮಿಂಚಿನ ಜಲಕ್ ಹುಟ್ಟಿಸುತ್ತಿತ್ತು ...

ನಾ ಕನಸಲ್ಲಿ ಕಳೆದುಹೋಗಿದ್ದೆ .. ನನ್ನ ತುಟಿಯನ್ನು ನಿ ಮ್ರದುವಾಗಿ ಕಚ್ಹುವವರೆಗೆ .. ಮಂದ್ರ ತುಟಿಗಳ ಮಿಲನ..
ಕಣ್ಣು ಅರೆ ಮುಚ್ಚಿತ್ತು ... ಚಂದ್ರ ಕೂಡ ನಾಚಿಕೆಯಿಂದ ಮೋಡದ ಹಿಂದೆ ಸರಿದು ನಮಗೆ ಕತ್ತಲೆಯ ಅಬಯ ಹಸ್ತ
ನೀಡಿದ ...

ನಿ ನನಗೆನನ್ನು ಕೊಟ್ಟೆ ? ನಾ ಏನನ್ನು ಪಡೆದುಕೊಂಡೆ ..?
ಗೊತ್ತಿಲ್ಲ .. ಕಳೆದು ಹೋದೆ ನಿನ್ನಲಿ .. ನಿನ್ನ ಕೈಗಳು ನನ್ನ ಬೆನ್ನ ಸುತ್ತ ಅಲೆಯುತ್ತಿದ್ದರೆ ತುಟಿಗಳ ಸೋಲಿಸುವ ಹುಮ್ಮಸ್ಸಿನಲ್ಲಿ ನಾ ಸೋತಿದ್ದೆ ..... ಎರಡು ಸಮುದ್ರಗಳು ಸೇರುವ ಜಾಗ.. ಯಾರು ಸೋಲರು ... ಯಾರು ಗೆಲ್ಲರು ...
ನಿರಂತರ ಯುದ್ದ ... ನಿರಂತರ ಬಾವ ಪರವಶತೆ ..... ಪರವಶವೇ ನಮ್ಮಿ ಜೀವನ ಅರ್ಥವಾಗುತ್ತಿತ್ತು..

ತುಂಬಾ ಹೊತ್ತಿನ ಅಗಾದ ಕನವರಿಕೆಯ ನಂತರ ನಿನ್ನ ಮುಕದ ಮೇಲೆ ಸಂತ್ರಪ್ತಿ ... ನಿನ್ನ ಮೈ ಮೇಲಿನ ಬೆವರಿನ ಸಾಲುಗಳನ್ನು ನಾ ನನ್ನ ಮಹಾಶ್ವೇತೆಯಲಿ ಅರಗಿಸಿಕೊಂಡೆ.. ನಿನ್ನ ಹಣೆಯ ಮೇಲೊಂದು ಮುತ್ತಿಟ್ಟೆ ..

ಕಾಲವು ವರ್ಶಿಸುತ್ತಿತ್ತು.. ನಿಸರ್ಗವು ಸುಭಾಶಿಸುತ್ತಿತ್ತು..
ಇಗ ನನ್ನ ಮಡಿಲಿನಲ್ಲಿ ನಿ....

.. ಮತ್ತದೆ ಮುಗ್ದ ನಗು..

ಮತ್ತದೆ ಮುಗುಳ್ನಗು.. ನೀ ಹಾಗೆಯೆ ನಿದ್ದೆ ಹೋದೆ..
ನಿನ್ನ ಕನಸಿನಲಿ ಬರಲು ನಾನು ಇರುಳಿನಲಿ ಜಾರಿ ಹೋದೆ

ಅನುರಾಗದ ಅಲೆಯಲ್ಲಿ



ಅರಳುತಿದೆ ಪ್ರಿತೀಯ ಸಂವೇದನೆ ಮನದಾಳದಲ್ಲಿ , ನುಡಿಯುತಿದೆ ಪ್ರೇಮದ ಸಂವಹನ ಕನಸಿನಾಳದಲಿ 
ಕನವರಿಸುತಿದೆ ಸ್ನೇಹದ ಸಿಂಚನ ತೆರೆಯ ಮರೆಯಲಿ , ನಿನ್ನ ನೋಡದೇನೆ , ನಿನ್ನ ಕಾಣದೇನೆ 
ಕರಗಿ ಹೋಗುತಿದೆ ನನ್ನ ಮನಸಿನ ಕಣಕಣಗಳು ನಿನಗಾಗಿ ಗೆಳತಿ 

ನಿನ್ನ ಸಮ್ಮೋಹನದ ಮಾತಿನ ಸೆಳೆತಕೆ 

ಮನಸಿಂದ ಮನಸಿಗಾಗಿ 
ಗೆಳೆಯನಿಂದ ಗೆಳತಿಗಾಗಿ 
ಪ್ರೀತಿಯಿಂದ ಪ್ರೀತಿಗಾಗಿ

ಇದು ಪ್ರೀತಿಯ ಪ್ರಜಾಪ್ರಬುತ್ವ

ಕಣ್ಣಿರಾಗದ ದುಃಖದ ನಡುವಿನ ಸಂತೋಷ ( To be continued ............)

ಮನಸ್ಸು ಬಿರಿದಿಟ್ಟ ಹಲಸಿನ ಹಣ್ಣಿನಂತಾಗಿತ್ತು . ಅಲ್ಲಲ್ಲಿ ಕೊಳೆತು ನಾರುತ್ತಿತ್ತು . ಚಿಕ್ಕ ಚಿಕ್ಕ ಬಿಳಿ ಹುಳುಗಳು ಆ ಕಡೆ , ಇ ಕಡೆ ಹರಿಯುತ್ತಿರುವ ಬಾವನೆ. ಮನಸ್ಸಿನ ಹುಳಗಳು . ಜೇಡು ಹೊಡೆಯದ ಮನೆಯ ಗೋಡೆಯ ಮೇಲೆ ಕುಳಿತು ದೂಳಿನ ಜೊತೆ ಸಹವಾಸ ಮಾಡಿದ ಹಲ್ಲಿಯಂತೆ ಕಂಡು ಬಂದೆ ನನಗೆ ನಾನೆ. ವಾಕರಿಕೆ ಬಂತು . ಬೆಂಗಳೂರು .. ಬೆಂಗಳೂರಿನ ಹೊಲಸು ಹೇಸಿಗೆಯ ಸುಖದ ರಾತ್ರಿಗಳು . ಅಬ್ಬಾ !! ಮೈ ಒಳಗಿನ ಪ್ರತಿ ರೋಮಗಳು ನೀತಿ ಕಳೆದುಕೊಂಡು , ಸುಬದ್ರವಾದ ಅಬಧ್ರದ ಸ್ತಿತಿಯಲ್ಲಿ ಸಿಲುಕಿ ತಮ್ಮನ್ನು ತಾವೇ ಹಳಿದುಕೊಂಡು ಪಕ್ಕದ ರೋಮಕ್ಕೆ ತಿಳಿದುಹೋದರೆ ಎಂದು ಅಲುಗಾಡದೆ ಮಲಗಿ ಬಿಟ್ಟಿದ್ದವು ತಮ್ಮ ಮುಲುಗುವಿಕೆ ಮುಗಿಸಿ ..

ಅವಳು ಕೂಗುತ್ತಲೇ ಇದ್ದಳು . ಮುಲುಗುವಿಕೆ . ಹಾದರದ ಹೊಸ್ತಿಲಲ್ಲಿ . ಕನ್ನಡವೂ ಅಲ್ಲ. ಸ್ವಚ್ಛ ಕನ್ನಡ ಬರುವುದಿಲ್ಲವೆನೋ?? ಆಂಗ್ಲವೂ ಅಲ್ಲ . ನನಗೆ ತಿಳಿಯುವುದಿಲ್ಲ ಎಂಬ ಬಯವೇನೋ !!? ಕಂಗ್ಲಿಷ್ನಲ್ಲಿ ಸಹಕರಿಸುತ್ತಲೇ , ತನ್ನ ಬೆತ್ತಲಾದ ಎದೆಯ ಕಣಿವೆಯಲ್ಲಿ ನನ್ನ ಬೊಗಸೆ ಮುಖವನ್ನು ಮುಚ್ಚಿಟ್ಟು, ತಲೆಯಲ್ಲಿ ಕೈ ಆಡಿಸಿ , ಎದೆ ಕೂದಲನ್ನು ನೇವರಿಸಿ , ತುಟಿಗಳನ್ನು ಸಮರ್ಪಿಸಿ ಮತ್ತು ಮತ್ತು ಗಾಡವಾಗಿ ಆಲಂಗಿಸುತ್ತಿದ್ದರೆ, ದೇಹ
ಸಹಕರಿಸಲೇ ಬೇಕಾಗಿತ್ತು . ಸಹಕರಿಸುತ್ತಿತ್ತು . ಉದ್ವೆಗಗೊಳ್ಳುತ್ತಿದ್ದಳು, ಹತೋಟಿ ತಪ್ಪಿದ ವಾಹನದಂತೆ ಚಲಿಸುತ್ತಿದ್ದಳು . ಮೈ ಬೆವರು ಬೆವರು .. ಸುಗಂದವೋ? ದುರ್ನಾತವೋ !? ವಿಚಿತ್ರವಾದರೂ ಸತ್ಯ . ಇವಳ್ಯಾರು? ನಾನ್ಯಾರು ? ತಾಸುಗಳ ನಿಮಿಷಗಳ ಪರಿಚಯ ಸಾಕಾ?? ದೇಹಗಳು ಕಾದ ಕುಲುಮೆಗಳಾಗಿ, ಎಲ್ಲವನ್ನು ಕಳೆದುಕೊಂಡು , ಬಂಜರಾಗಿ , ಮುಡುಗಿಹೋದ ಐಶಾರಾಮಿ ಹಾಸಿಗೆಯ ಕಮರಿ ಹೋದ ಸ್ವಪ್ನಗಳಾಗಲು..? ಎಂಜಲು ಬಾಳೆ, ನೆಕ್ಕುತ್ತಿರುವ ನಾಯಿ . ಗಂಡನೆಲ್ಲೋ ಇವಳಿಗಾಗಿ ಮುಂಬರುವ ಮಕ್ಕಳಿಗಾಗಿ ಸತ್ತು ಸುಣ್ಣವಾಗುತ್ತಿರುವ ಕಪ್ಪು ರಾತ್ರಿಯಲ್ಲಿ , ಇನ್ಯಾರದೋ ಬಾಹು ಬಂದನದಲ್ಲಿ, ಮದುರ ಚುಂಬನದಲ್ಲಿ , ಸುಖದ ತುತ್ತ ತುದಿಯ ನಶೆಯಲ್ಲಿ , ಎಲ್ಲವನ್ನೂ ಕೊಟ್ಟು , ತನ್ನತನವ ಬಿಟ್ಟು ಕಾಮದ ಕೆನ್ನಾಲಿಗೆಯಲ್ಲಿ ಮಲಗೆದ್ದವಳ ಮೋಹಕತೆಗೆ ಸತ್ತು ಬಂದ ಗಂಡ ಎಂಬ ಗಂಡು ಪ್ರಾಣಿ, ನರಸತ್ತ , ನಿರರ್ಥಕ ಹರದಾರಿ ನಡೆದಂತೆ , ಹಗಲಿನ ಬಂಡ ಹಸಿವನ್ನು ತೀರಿಸಿಕೊಂಡು , ಆಕೆಯ ಕಡೆ ಲಕ್ಷ್ಯ ಕೊಡದೆ ಪಕ್ಕ ಸರಿದು ನಿದ್ರೆ ಹೋದ ಎಷ್ಟೋ ಕ್ಷಣಗಳ ನಂತರದ ಆಕೆಯ ಕಂಬನಿಯೇ ಈಗ ನನ್ನ ಮೇಲೆ ಬೆವರಾಗಿ ಹರಿಯುತ್ತಿದೆ ಎನ್ನಿಸಿತು.

ಯಾರ ಮೇಲಿನ ಸಿಟ್ಟೋ ? ದುಃಖವೋ ? ಆಂತರ್ಯದಲ್ಲಿ ಕಟ್ಟಿಟ್ಟುಕೊಂಡ ಬಾವನೆಗಳ ಜಲಾಶಯದ ಕಟ್ಟೆ ಒಡೆದಂತೆ .. ಹಲವಾರು ತಾಸು ಮಳೆಯ ನಂತರದ ಕುಮಾರದಾರೆಯಂತೆ .. ಮುನ್ನುಗ್ಗುತ್ತಲೇ ಇದ್ದಳು . ನನಗಿವೆಲ್ಲ ಹೊಸತು . ದೇಹವು ಪಳಗಿಲ್ಲ . ತಿಳಿದಂತಿತ್ತು ಆಕೆಗೂ . ಕಣ್ಣಲ್ಲಿ ಅದೇನೋ ಕಾಂತಿ . ಮೈಲಿ ಅದೇನೋ ಹೊಳಪು . ಗುರುವಾದಳು ಶಿಷ್ಯನಾದೆ . ಪಾತ್ರದ ಪರಿಚಯವಿಲ್ಲ . ಬೇರೆ ಪಾತ್ರಧಾರಿಗಳಿಲ್ಲ. ಹಾಸಿಗೆಯೆ ರಂಗ ಮಂಟಪ . ಕಾಮರಾಜಮಾರ್ಗ ನಾಟಕ . ಬಣ್ಣ , ವೇಷ ಬುಶಣಗಳ ಅವಶ್ಯಕತೆಯಿಲ್ಲ . ನಿರಾಬರಣವೆ ಸುಂದರ . ದೇವರು ಕಡೆದ ಕಲಾಕ್ರತಿ . ಸಣ್ಣನೆ ಸೊಂಟ , ಉದ್ರೆಕಕ್ಕೆ ಕನ್ನಡಿ ಹಿಡಿಯುವಂಥ ಸ್ವಜನ , ಸುಜಲ ಸುಕೋಮಲ ಕುಚದ್ವಯಗಳು. ನೀಳ ಮಟ್ಟಸ ಹೊಟ್ಟೆಯ ಇಳಿಜಾರು .

ನಾನೇನು ಸುಂದರನಲ್ಲ . ಕುರುಪಿಯಂತೆ ಕಾಣಲು ಇಲ್ಲ ಅವಳಿಗೆ . ಉಸಿರಾಟದ ವೇದಿಕೆಗೆ ಮುಲುಗುವಿಕೆಯ ಸಂಗೀತ, ನಾನು ಬರಿದಾಗಿ ಬಂಡತನದಿ ಅವಳ ಎದೆ ಕಚ್ಚಿ ಮಲಗುವವರೆಗೂ ಕೇಳುತ್ತಲೇ ಇತ್ತು . ರಾತ್ರಿ ಅದು ನಿಂತಿದ್ದು ನಾನು ಬಿರುಸಾಗುವವರೆಗೂ ಮಾತ್ರ. ಸೂರ್ಯನ ಬೆಳಕು ಕಾಣುತ್ತಲೇ ತರಾತುರಿಯಿಂದ ನನ್ನ ಎಬ್ಬಿಸಿ ಅರ್ಧ ತೆಗೆದ ಬಾಗಿಲಿನಿಂದಲೇ ನನ್ನ ಹೊರದಬ್ಬಿ " ಮತ್ತೆ ಸಿಗೋಣ " ಎನ್ನುತ್ತಾ ದಡಾರನೆ ಬಾಗಿಲು ಹಾಕಿಕೊಂಡಾಗ ಅದು ಕನಸಿನ ಮಾತು ಎಂದು ತಿಳಿದಿರುವಂತೆ ನನ್ನ ಮುಕದ ಮೇಲೊಂದು ವಿಷಾದವೋ, ವಿಪರ್ಯಾಸವೋ ತಿಳಿಯದ ನಗುವೊಂದು ಹಾಡು ಹೋಯಿತು . ಆಗಷ್ಟೇ ಹಾಲು ಹಾಕಲು ಬಂಡ ಹುಡುಗ ಇದು ತನಗೆ ಸಹಜ ಎಂಬಂತೆ ನನ್ನ ಮುಕ ನೋಡಿ ನಕ್ಕ. ತಲೆ ಬಗ್ಗಿಸಿ ನಡೆದೆ ಗೊತ್ತಿರದ ಅನಾಮಿಕ ಹಾದಿಯಲ್ಲಿ . ಕವಲು ದಾರಿಗಳು ನನ್ನ ನೋಡಿ ಬಾ ಎಂಬಂತೆ ಕೈ ಬಿಸಿದವು .

ಬೆಂಗಳೂರು ಬಂದಿಳಿದ ದಿನದಿಂದಲೂ ಊರು ಹಿಡಿಸಿದ್ದು ಅಷ್ಟಕ್ಕಷ್ಟೇ . ದೊಡ್ಡ ದೊಡ್ಡ ಕಟ್ಟಡಗಳು , ಐಶಾರಾಮಿ ಕಾರುಗಳು , ದುಡ್ಡಿನ ಹೊಳೆ ಹರಿಯದಿದ್ದವರ ಮೆಜೆಸ್ಟಿಕ್ ಬಸ್ ಸವಾರಿಗಳು , ಹುಚ್ಚು ಹಿಡಿಸುವ ಟ್ರಾಫಿಕ್ , ಬೇಡಿ ತಿನ್ನುವವರು , ಕೊಂದು ಬದುಕುವವರು . ಕಂಗಳ ಕಾಂತಿ ಕಳೆದುಕೊಂಡ ಮನುಷ್ಯರು . ಮನುಷ್ಯರಂತೆ ಕಾಣುವ ರೋಬ್ಹೊಗಳು. ಉಸಿರಾಡುವ ಆರ್ಟಿಫಿಷಿಯಲ್ ಇಂಟಲಿಜನ್ಸ ಸಾಫ್ಟ್ವೇರ್ಗಳು . ಮನುಷ್ಯನನ್ನೇ ಮರುಸ್ರಷ್ಠಿ ಮಾಡಬೇಕೆಂದು ಹೊರಟಿರುವ ದಿಗ್ಗಜರು . ಅವರಿಗೆ ಸೆಲ್ ಆಗಿ ಕುರಿಗಳಂತೆ ಬಸ್ನಲ್ಲಿ ಕುಳಿತು ಹೋಗುವ ಶ್ರೀಮಂತ ಕೂಲಿಗಳು . ಅವರನ್ನು ನೋಡಿ ಹೊಟ್ಟೆ ಕರುಳು ಕರಗಿ ಹೋಗುವಂತೆ ಕರುಬುವ ನನ್ನಂತ ಕೆಲಸವಿಲ್ಲದ , ಕೆಲಸವಿದ್ದು ಕೆಲಸ ಹುಡುಕುವ ದರಿದ್ರ ಜೀವನಗಳು ....

ನಗಬೇಕೆನ್ನಿಸಿತು ನಕ್ಕೆ ... ಆಂತರ್ಯ ?? ಬಿಕ್ಕಿ ಬಿಕ್ಕಿ ಅಳುತ್ತಿತ್ತು . ಎಲ್ಲಿದೆ ಸಂತೋಷ ? ಯಾವುದು ಸಂತೋಷ? ಯಾಕಾಗಿ ಇ ಜಂಜಾಟದ ಬದುಕುಗಳು ?? ದುಡ್ಡಿನ ಹಿಂದೆ ಓಡಿ ಹೆಣವಾಗುತ್ತಿರುವ, ಬದುಕಿದ್ದು ಶವಗಳಾಗಿರುವ ಬದುಕು ಬದುಕಾ?

ಎಷ್ಟು ಚಂದ ನನ್ನ ಹಳ್ಳಿ . ಎಷ್ಟು ಚಂದ ನಮ್ಮ ಜೀವನ . ದುಡ್ಡಿರುತ್ತೋ? ಬಿಡುತ್ತೋ ! ಖುಷಿ ? ಕಣ್ಣಿನಲ್ಲಿ ನೀರು ಚಿಮ್ಮಿದರೆ ಒರೆಸಲು ಸಂಭಂಧಗಳ ಹಸ್ತ ? ಇಲ್ಲೇನಿದೆ ? ಅಳಬೇಕಾ ? ಅತ್ತು ಸಾದಿಸುವುದೇನೂ ?? ೨೫ ವರ್ಷಗಳು ಓದಿದೆ . ವ್ಯರ್ಥ . ಇನ್ನೂ ಕೂಲಿತನ . ನಾನು ಒಬ್ಬ ಶ್ರೀಮಂತ ಕೂಲಿ . ಸ್ವಂತಿಕೆಯಿಲ್ಲದ ಪರಿಪೂರ್ಣ ಬಾಳು . ಮತ್ತೆ ಅಳಬೇಕೆನ್ನಿಸಿತು . ನಿಶ್ಯಬ್ದತೆ ತುಂಬಿದ ಒಂಟಿ ನಿಸರ್ಗ ಸಿಕ್ಕಿದ್ದರೆ , ಜಂಟಿಯಾಗಿ ಕಳೆದ ಗೆಳತಿಯ ತುಂಬು ಪ್ರೀತಿ ಕಂಡಿದ್ದರೆ , ಅಮ್ಮನ ಮಮತೆಯ ಮಡಿಲಿದ್ದರೆ ಅತ್ತು ಹಗುರಾಗುತ್ತಿದ್ದೆನೇನೋ ? ಇಲ್ಯಾವುದು ಇಲ್ಲ . ಅದ್ಯಾವುದು ಇಲ್ಲ ಎಂದು ಬಂದ ಹಲವೆ ಘಂಟೆಗಳಲ್ಲಿ ತಿಳಿದಿತ್ತು . ಅಥವಾ ನಾನು ಹಾಗೆ ತಿಲಿದುಕೊಂಡೆನೊ ?..

ಬಸ್ ಪಾಸ್ ಮಾಡಿಕೊಂಡ , ಮೆದುಳು ಸತ್ತ ಒಂಟಿ ಜೀವ ತಿರುಗದ ಗಲ್ಲಿಯಿಲ್ಲ . ಸಮಾಧಾನವಿಲ್ಲ . ಏನು ಮಾಡಬೇಕೆಂಬ ಕಚಿತ ಅಭಿಪ್ರಾಯವೂ ಇಲ್ಲ . ಸೋಲ್ಡ್ ಔಟ್ ಆಗಲು ಇಷ್ಟವಿಲ್ಲ . ಹಾಗಾಗದಿದ್ದರೆ ಇಲ್ಲಿ ಬದುಕಲು ಸಾದ್ಯವಿಲ್ಲ . ಅರ್ಥವಿಲ್ಲದ , ಅರ್ಥ ಹುಡುಕಿದರೂ ವ್ಯರ್ಥವಾಗುವ ಸಮಸ್ಯೆ ಅಲ್ಲದ ಸಮಸ್ಯಾತ್ಮಕ ಪ್ರಶ್ನೆಗಳು .ಹುಚ್ಚಾ?? ಮನಸ್ಸು ಒಪ್ಪಿಕೊಳ್ಳದು . ಅದರದೇ ಸ್ವಾರ್ಥ ಅದಕ್ಕೆ . ಗುರಿಯಿಲ್ಲದ ದಾರಿಗಳನ್ನು ಸವೆದೆ . ಏಕೆ ಹೀಗಾಗಿ ಹೋದೆ ? ಸಮಸ್ಯೆಗಳಿಲ್ಲದೆ ಇರುವುದೇ ನನ್ನ ಸಮಸ್ಯೆಯಾ? ಯೋಚಿಸುತ್ತಲೇ ಹೋದ ದಾರಿಯಲ್ಲೇ ಹಿಂತುರಿಗಿದೆ . ದಾರಿ ತಪ್ಪಿದರು ಯಾರನ್ನೂ ಕೇಳಲಿಲ್ಲ . ಎಲ್ಲಿಗೆ ಹೋಗಬೇಕೆಂಬ ನಿರ್ದಿಷ್ಟ ಜಾಗವೂ ಇರಲಿಲ್ಲ ಎನ್ನುವುದು ಸರಿಯೇ .

"ಸಮಸ್ಯೆಗಳಿಲ್ಲದ ಮನುಷ್ಯನಿಗೆ ಇಷ್ಟು ಸಮಸ್ಯೆಯಾ? ಅಣಕವಾಡಿತು ಅಂತರಂಗ . ಜಾಡಿಸಿ ಒದ್ದೆ . ಮತ್ತೆ ಮಾತಿಲ್ಲ .
ದೊಡ್ಡ ದೊಡ್ಡ ಮಹಡಿ ಕಟ್ಟಡಗಳು , ನಾನು ಕಟ್ಟಿಸುತ್ತೇನೆ . ಐಶಾರಾಮಿ ಕಾರುಗಳು ತೆಗೆದುಕೊಂಡರಾಯಿತು . ಯಾವುದು ಅಸಾದ್ಯವಿಲ್ಲ ನನಗೆ . ಅಹಂ ಬ್ರಮ್ಮಾಸ್ಮಿ ನಂಬುವವನು ನಾನು . ಹೋಟೆಲ್ ಮಾಡಿದರೆ ? ಕಂಪನಿ ತೆಗೆದರೆ ?? ಸಿನೆಮಾ ದುನಿಯಾ ಸೇರಿ ಬಿಟ್ಟರೆ ? ಕತೆ ಕವನಗಳನ್ನು ಬರೆದರಾಯಿತು . ಮನೆಗೆ ಹೋಗಿ ಬಿಟ್ಟರೆ ? ಅದೇ ಹಸಿರು , ಚಂದದ ಗಾಳಿ , ತಂಪನೆ ಮಳೆಗಾಲ , ಮನೆ , ಮನೆ ಬದಿಯ ಕೆರೆ , ಬಾಲ್ಯದ ಆಟಗಳು , ಪುಟಾಣಿ ಗೆಳೆಯರು , ಮುಸ್ಸಂಜೆಯ ಜಿರುಂಡೆಗಲು , ಅಮ್ಮನ ಕೈ ಊಟ, ಅಜ್ಜನ ವಾತ್ಸಲ್ಯ .

ಅಪ್ಪ ಮಾಡಿಟ್ಟ ಆಸ್ತಿಯಾ?? ಕುಟುಕಿತು ಅಂತರಂಗ.

ಹಾಗಲ್ಲ . ಜೀವನವಲ್ಲ ಇದು .ಯಾರು ಇಲ್ಲದ ದುಡ್ಡಿನ ಮೇಲೆ ವ್ಯಾಮೋಹದ , ಅರ್ಧ ಬೆಂದ ಅನ್ನ, ಹಲಸಿ ಹೋದ ನಿನ್ನೆ ರಾತ್ರಿಯ ಸಾಂಬಾರ್ ಜೀವನಾ? ದುಡ್ಡಿನ ಕಂತೆಗಳೇ ಜೀವನದ ಪರಿಪುರ್ಣತೆಯಾ?? ವಾರದ ಎಂಡ್ ಗಳಿಗೆ ಕಾದು ಕಾದೂ .. ನರಳಿತು . ವಿಷಾದದಲ್ಲಿ ಮನಸ್ಸು . ಬಹಳಷ್ಟು ಪ್ರಶ್ನೆಗಳು . ಉತ್ತರವಿದ್ದವಾ? ಯಾರ ಬಳಿ? ನನಗೆ ಸಮಾದಾನ ಕೊಡಬಹುದಾ ? ನಿಜವಾಗಿಯೂ ಹುಚ್ಚು ಹಿಡಿದಿತ್ತು . ಮಾನವೀಯತೆ ಮೇರೆ ಮೀರಿತ್ತು . ಕಣ್ಣು ಕಾಣದವರಿಗೆ ರಸ್ತೆ ದಾಟಿಸಿದೆ . ಏರಿನಲ್ಲಿ ನಿಂತ ತಳ್ಳುಗಾಡಿಯವನಿಗೆ ಸಹಕರಿಸಿದೆ . ಕಾರ್ ಅಡಿಗಾಗಿ ಸಾಯುತ್ತಿದ್ದ ನಾಯಿ ಮರಿಗೆ ನೀರು ಹಾಕಿದೆ . ಯಾವುದೊ ಕಟ್ಟೆಯ ಮೇಲೆ ಕುಳಿತು ಅರ್ದ ಕಪ್ ಟೀ ಕುಡಿದು , ಎರಡೆರಡು ಸಿಗರೇಟ್ ಸುಟ್ಟು ಪ್ರಪಂಚವೇ ಸಿಕ್ಕಿತು ಎಂಬ ಬಾವದಲ್ಲಿರುವ ಮುಡ ಜನರನ್ನು ನೋಡಿ ಅಳುತ್ತಾ, ನಗುತ್ತಾ ಕಳೆಯುತ್ತಿದ್ದ ದಿನಗಳಲ್ಲಿ ಸಿಕ್ಕಳವಳು . ಹಿಂದಿನ ದಿನವಷ್ಟೇ ಅನಾಮದೇಯ ಅನಾಮಿಕ ಹೆಣ್ಣಿನ ಕಾರ್ ಹತ್ತಿ ಗಂಡು ಸೂಳೆಯ ಪಾಡು ಪಟ್ಟಿದ್ದರು ಮತ್ತವಳ ಕಾರ್ ಏರಲು ಸಾಹಸ ಮಾಡಿದ್ದೆ . ನಾ ಹುಚ್ಚನಲ್ಲವೇ? ತೇಪೆ ಹಚ್ಚುತ್ತಿದ್ದೆ . ಬಿಟ್ಟಿ ಸುಕವಲ್ಲವೇ ? ಕುಗುತ್ತಲೇ ಇತ್ತು ಅಂತರಂಗ.

Sunday, June 23, 2013

ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ

ಮನಸೆಕೋ ಹಾಡಿದೆ ಈ ಹಾಡನು
ನೆನಪಿಸಿದೆ ಮಳೆನಿಂತ ಜಾಡೊಂದನು
ಮಿಂಚಿ ಮರೆಯಾದ ನಿನ್ನಯಾ ನಗು
ಕಿವಿಮುಚ್ಹೋ ಮೊದಲೇನೆ ಕೇಳುವಾ ಗುಡುಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಹಗಲಲ್ಲೊ, ಇರುಳಲ್ಲೋ ಒಮ್ಮೆ ಮುದ್ದಿಸು
ಸಾಕಾದ ಏಕಾಂತ ನೀ ತಪ್ಪಿಸು
ಅಭಿಮಂತ್ರಿಸು, ಆಮಂತ್ರಿಸು ..
ಬಯಸಿರುವಾ ತುಟಿಗಳಾ ಒಮ್ಮೆ ಚುಂಬಿಸು ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ನಲ್ಲೆ, ನಲ್ಲೆ ..
ನಿನ್ನಲ್ಲೇ ಕಳೆದುಹೋದ ನನ್ನಯಾ ಎಲ್ಲೆ
ನೀ ನಡೆದ ದಾರಿಯ ಸವೆಯಬಲ್ಲೆ
ನಿಟ್ಟುಸಿರ ಬಿಡಲೊಮ್ಮೆ ನಿಲ್ಲೆ ಅಲ್ಲೇ ..
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...

ಏಕಾಂತ ಸಾಹಿತ್ಯ ಸಾನಿಧ್ಯ ತೊರೆದು
ಸಖಿಗೀತ ಮೂಡಿಸುವೆ ನಿನ್ನ ಚಿತ್ರ ಬರೆದು
ಸ್ವಲ್ಪವೇ ಜಾರಬಹುದು, ನಿನ್ನ ಛಾಯೆಯ ಸೆರಗು
ಕೊಡು ಕೊಡುತಾ ನಿನ ಅಂದಕೆ ಇನ್ನಷ್ಟು ಮೆರಗು
ಲಾಲಾಲಾ ... ಲಾಲಾಲಾ ... ಲಾಲಾಲಾ ... ಲಾಲಾಲಾ ...


Saturday, June 22, 2013

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

ಅಲೆಗಳೇ ಹುಚ್ಚೇ, ನಾನೇ ಹೆಚ್ಚೇ
ಇನ್ನು ಸಾಕೇ ?? ಮತ್ತು ಬೇಕೇ??
ಮಿಥ್ಯಕೆ ಮಿಥ್ಯ , ಸಾವೇ ಸತ್ಯ
ಸತ್ಯಕೂ ಮಿಥ್ಯ , ಸತ್ಯದ ಸಾವೇ ಮಿಥ್ಯ
ಕತ್ತಲಲಿ ಬೆಳೆಯುತಿಹುದು ಮಿಥ್ಯ
ನಿಂತು ನೋಡುತಿರುವ ಸತ್ಯ , ಸಾವಲು ನಗುತಲಿರುವ ಸತ್ಯ

ಬಾವನೆ ಸಾಕು , ಬೆತ್ತಲೆ ಬೇಕು
ಅವಳು ಬೇಕು , ಆದುವು ಬೇಕು
ಎಲ್ಲವು ನಾನೇ , ಎಲ್ಲವೂ ನನದೆ
ಮನುಜನೆ ಇಲ್ಲವೇ ನಿನಗೆ ತೀರಾ ??
ತೀರದಾ ವ್ಯಾಮೊಹಗಳಿಗೆ ಬೇಲಿ ಎಂಬ ತೀರಾ
ಮನಸಿಗೆ ಸಾಕು ಎಂಬ ತೀರಾ ... ಸತ್ಯವೇ ಬೇಕು ಎಂಬ ತೀರಾ ..

ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ
ಕಡಲಿಗೊಂದು ತೀರಾ.
ಮನವಾ ಬಡಿಯಲೊಂದು ತೀರಾ, ಮೌನವ ಕದಡಲೊಂದು ತೀರಾ
ಕಡಲಿಗೊಂದು ತೀರಾ.. ಕಡಲಿಗೊಂದು ತೀರಾ..
ನೀಲಿ ಅಲೆಗಳ, ದೊಡ್ಡ ತೆರೆಗಳಾ
ತಡೆಯಲೊಂದು ತೀರಾ , ತಡೆಯಲೊಂದು ತೀರಾ , ತಡೆಯಲೊಂದು ತೀರಾ

Wednesday, June 12, 2013

ನೀನೆ ತಂಪು, ನಿನಗೇಕೆ ತಂಪು ??

ಮಳೆಯ ಹನಿಯೊಂದು ನೆಲ ಸೇರಿದೆ
ಮುಗಿಲ ಮರೆಯಿಂದ ನೆಲೆ ಜಾರಿದೆ.
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಹ್ರದಯಕ್ಕು ನೋವು ತಿಳಿದಂತಿದೆ ..


ಆಹಾ, ಆಹಾ ! ಮತ್ತೇಕೆ? ಮತ್ತೇಕೆ??
ಅದುವೇ ಆಸೆ !!
ಮುಗಿಲೇ ಬೇಕೆನ್ನೋ ಮಳೆ ಹನಿಯ ಭಾಷೆ, ಜೊತೆಯಾಗಿ ನಿಲ್ಲೋಕೆ ರವಿಯೆಂಬ ಉಷೆ 
ಅವಳತ್ತ ಸಾಗೆನ್ನೋ ಮನಸಿನ ನಿಶೆ, ಪ್ರೀತಿಯ ನಶೆ ..


ನನ್ನಲ್ಲಿ ಸೇರೋಕೆ ಮನಸಾಗದೆ ? ಹೊಸ ಚಿಗುರಿಗೆ ಉಸಿರು ನಿನಾಗದೆ ..
ನೀನೆ ತಂಪು, ನಿನಗೇಕೆ ತಂಪು ??
ಬಾ ನನ್ನ ಸನ್ನಿದಿಗೆ ಶ್ವೇತಾಂಬರಿ , ಕಾಯುತ್ತ ನಿಂತಿಹಳು ಗೋಧಾವರಿ.
ಸಖಿಯು ನೀನೆ, ಸಂಗಾತವೂ ನೀನೆ
ಮುನ್ನುಡಿಯ ಸಾಲು ಬೇಕಾಗಿದೆ, ಪಲ್ಲವಿಯ ನಾ ಬರೆದು ಇತ್ತಾಗಿದೆ.  

 
ಉಸಿರೇ ಬದುಕು, ಬಾವಕ್ಕೇ ಬದುಕು ತೆರೆಮರೆಯ ಆಟಕ್ಕೆ ಸಮಯ ಎಲ್ಲಿದೆ ?
ಮುಗಿಲೆತ್ತರದ ಜೀವನ ಕೈ ಬಿಸಿದೆ .  
ರಸವೇ ಜನನ, ವಿರಸವೇ ಮರಣ, ಸಮರಸವೆ ಜೀವನ ತಿಳಿದಾಗಿದೆ
ಮಳೆಹನಿಯಲಿ ಬುವಿಯು ಮಿಂದಾಗಿದೆ , ಅವಳಿಗ ಬಳಿ ನಿಂದು ನಲಿದಾಗಿದೆ
 
ಮಳೆಯ ಹನಿಯೊಂದು ನೆಲ ಸೇರಿದೆ
ಹಸಿರಾ ಉಸಿರಿಗೆ ಜೀವ ನೀಡಿದೆ 
ಕಣ್ಣಾ ಹನಿಯೊಂದು ಕೆನ್ನೆ ತಿಡಿದೆ
ಆನಂದ ಭಾಷ್ಪಕ್ಕು ಹ್ರದಯ ಮಿಡಿದಿದೆ.